ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150ನೇ ಪಂದ್ಯದಲ್ಲಿ ಚೆಟ್ರಿ ಗೋಲಿನ ಹೊರತಾಗಿಯೂ ಅಫ್ಗನ್ ವಿರುದ್ಧ ಸೋತ ಭಾರತ

Published 26 ಮಾರ್ಚ್ 2024, 22:29 IST
Last Updated 26 ಮಾರ್ಚ್ 2024, 22:29 IST
ಅಕ್ಷರ ಗಾತ್ರ

ಗುವಾಹಟಿ: ನಾಯಕ ಸುನಿಲ್‌ ಚೆಟ್ರಿ ತಮ್ಮ 150ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದ ಗೋಲಿನ ಹೊರತಾಗಿಯೂ ಭಾರತ ತಂಡವು ಫೀಫಾ ವಿಶ್ವಕಪ್‌ ‘ಎ’ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ತಂಡದ ವಿರುದ್ಧ 1–2ಯಿಂದ ಪರಾಭವಗೊಂಡಿತು.

ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ತನಗಿಂತ ಕೆಳ ಕ್ರಮಾಂಕದ ತಂಡದ ವಿರುದ್ಧ ಭಾರತ ಮುಗ್ಗರಿಸಿತು. ಮೈಲಿಗಲ್ಲು ಪಂದ್ಯದಲ್ಲಿ ಚೆಟ್ರಿ ಭಾರತಕ್ಕೆ 37ನೇ ನಿಮಿಷದಲ್ಲಿ ಮುನ್ನಡೆ ಒಗಿಸಿದರು. ಎದುರಾಳಿ ತಂಡದ ಹರೂನ್ ಅಮಿರಿ ಬಾಕ್ಸ್‌ನೊಳಗೆ ಚೆಂಡನ್ನು ಹ್ಯಾಂಡಲ್ ಮಾಡಿದ ಕಾರಣ ಸಿಕ್ಕ ಪೆನಾಲ್ಟಿ ಅವಕಾಶವನ್ನು ಚೆಟ್ರಿ ಗೋಲಾಗಿ ಪರಿವರ್ತಿಸಿದರು.

71ನೇ ನಿಮಿಷದಲ್ಲಿ ಅಫ್ಗನ್‌ ತಂಡದ ರಹಮತ್ ಅಕ್ಬರಿ ಚೆಂಡನ್ನು ಗುರಿ ಸೇರಿಸಿ ತಂಡದ ಸ್ಕೋರ್‌ ಅನ್ನು 1–1ರಿಂದ ಸಮಬಲ ಗೊಳಿಸಿದರು. ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇರುವಾಗ ಅಫ್ಗಾನ್‌ ಮತ್ತೊಬ್ಬ ಆಟಗಾರ ಶರೀಫ್ ಮುಖಮದ್ (88ನೇ ನಿಮಿಷ) ಅವರಿಗೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಆಘಾತ ನೀಡಿದರು.

ಸೌದಿ ಅರೇಬಿಯಾದಲ್ಲಿ ಮಾರ್ಚ್ 22ರಂದು ನಡೆದ ಮೊದಲ ಲೆಗ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ 0–0 ಯಿಂದ ಡ್ರಾ ಆಗಿತ್ತು.

ದಾಖಲೆ ವಿಸ್ತರಣೆ: ಈ ಪಂದ್ಯದಲ್ಲಿ 39 ವರ್ಷದ ಚೆಟ್ರಿ 94ನೇ ಅಂತರರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಲ್ಲಿ ಚೆಟ್ರಿ ವಿಶ್ವದಲ್ಲಿ ನಾಲ್ಕನೇ ಸ್ಥಾನವಿದೆ. ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್‌-128), ಅಲಿ ದಾಯಿ (ಇರಾನ್‌-108) ಲಿಯೊನೆಲ್‌ ಮೆಸ್ಸಿ (ಅರ್ಜೆಂಟಿನಾ-106) ಮೊದಲ ಸ್ಥಾನದಲ್ಲಿರುವ ಮೂವರು.

ಚೆಟ್ರಿ 2005ರ ಜೂನ್ 12ರಂದು ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ರಾಷ್ಟ್ರೀಯ ಜರ್ಸಿ ಧರಿಸಿದ್ದರು. ಅವರು ತಮ್ಮ 25, 50, 75, 100 ಮತ್ತು 125ನೇ ಪಂದ್ಯದಲ್ಲಿ ಕನಿಷ್ಠ ಒಂದು ಗೋಲು ಗಳಿಸಿದ ಅನನ್ಯ ದಾಖಲೆಯನ್ನು ಹೊಂದಿದ್ದಾರೆ. ಈ ಪಂದ್ಯಕ್ಕೂ ಆ ದಾಖಲೆಯನ್ನು ವಿಸ್ತರಿಸಿಕೊಂಡರು.

Highlights - Guwahati, Mar 26 (PTI) Lower-ranked Afghanistan shocked India 2-1 as the home team suffered one of its most embarrassing defeat in recent years despite talisman Sunil Chhetri's 94th international goal in his 150th match, in the 2026 FIFA World Cup Qualifiers here on Tuesday. In his landmark game, Chhetri did what was expected of him and found the back of the net from the spot in the 37th minute after Haroon Amiri handled the ball inside the box in India's home leg match in the second round of the joint qualifiers for the World Cup and 2027 AFC Asian Cup. Attacking on the counter with three strikers upfront, Afghanistan equalized as Rahmat Akbari restored parity in the 71st minute after he shot from outside the box and the ball went through the legs of Rahul Bheke after a deflection to make it 1-1. Disaster struck the Indians when a charging Gurpreet Singh was shown a yellow card and Sharif Mukhammad converted the resultant penalty (88') to give his team a 2-1 lead with just two minutes left in regulation time. Afghanistan goalkeeper Ovays Azizi guessed it right but the 39-year-old Chhetri packed enough power in his shot to beat the visiting custodian, much to the delight of the crowd that thronged the Indira Gandhi Athletic Stadium in anticipation of a fine performance form their much-loved footballer. After a brief phase of relentless end-to-end attacks, Chhetri's strike separated the two teams at the half time and India held on to the lead until Rahmat Akbari equalised in the 71st minute before Mukhammad's later strike, which would eventually go on to dash Indian hopes as the visitors earned three points from the match. Long before that, Liston Colaco came close to doubling India's lead. But he failed to control the ball as the Afghans managed to retrieve it from him. Right at the start of the match, Manvir Singh missed an easy chance to put India ahead but his shot off a rebound, after a Chhetri shot rattled the woodwork, flew over the net. India coach Igor Stimac made three substitutions and brought Anirudh Thapa, Naorem Mahesh and Lallianzuala Chhangte in place of Brandon Fernandes, Liston Colaco and Chhetri. But, these changes did little to extend India's dominance and instead, the visitors found the equalizer. The worse was in store for India as the visitors put another one past a hapless Sandhu to break Indian hearts. India and Afghanistan drew the first leg 0-0 in Abha, Saudi Arabia on March 22.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT