ಮಂಗಳವಾರ, ಜನವರಿ 21, 2020
18 °C

ಮಗಳಿಗಾಗಿ ಫುಟ್‌ಬಾಲ್‌ ತೊರೆದ ‘ವಿಶ್ವಕಪ್ ವಿಜೇತ’ ಡೆನಿಯಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೂನಸ್ ಐರಸ್ (ಅರ್ಜೆಂಟೀನಾ): ಮಗಳೊಂದಿಗೆ ಕಾಲ ಕಳೆಯಲು ಬಯಸಿರುವ ಇಟಲಿಯ ಅನುಭವಿ ಆಟಗಾರ ಡೆನಿಯಲ್‌ ಡಿ ರೊಸ್ಸಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಘೋಷಿಸಿದರು.

ನಗರದಲ್ಲಿ ಸೋಮವಾರ‌ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿದಾಯ ಪ್ರಕಟಿಸಿರುವ 36 ವರ್ಷದ ಡೆನಿಯಲ್‌, ‘ನಾನು ಮನೆಗೆ ತೆರಳಲು ಬಯಸಿದ್ದೇನೆ. ಫುಟ್‌ಬಾಲ್‌ ಮತ್ತು ಬೋಕಾ ಕ್ಲಬ್‌ನಿಂದ ಹೊರನಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಆರು ತಿಂಗಳ ಹಿಂದಷ್ಟೇ ಅರ್ಜೆಂಟೀನಾದ ಬೋಕಾ ಜೂನಿಯರ್ಸ್‌ ಕ್ಲಬ್ ಸೇರಿದ್ದ ಅವರು, ಸಾಕಷ್ಟು ಸಲ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ‘ಗಂಭೀರವಾದ ಆರೋಗ್ಯ ಸಮಸ್ಯೆಗಳೇನು ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದುವರಿದು, ‘ನನ್ನ 14 ವರ್ಷ ಮಗಳು ಇಟಲಿಯಲ್ಲಿದ್ದಾಳೆ. ತನ್ನಪ್ಪ ಜೊತಗಿರುವುದನ್ನು ಆಕೆ ಬಯಸಿದ್ದಾಳೆ. ಅಲ್ಲಿ ಅವಳಿಗೇನೂ ತೊಂದರೆ ಇಲ್ಲ. ಆದರೂ ನಾನು ಅಲ್ಲಿರಲು ನಿರ್ಧರಿಸಿದ್ದೇನೆ’ ಎಂದು ನುಡಿದಿದ್ದಾರೆ.

‘ಮಗಳು ಮತ್ತು ಕುಟುಂಬದಿಂದ ದೂರ ಇರುವುದು ನನ್ನನ್ನು ಸಾಕಷ್ಟು ಕಾಡುತ್ತಿದೆ. ಅವರಿಗೂ ಹಾಗೆಯೇ ಆಗಿದೆ. ಹಾಗಾಗಿ, ನನ್ನ ಹೃದಯದಲ್ಲಿ ಸ್ಥಾನ ಪಡೆದಿದ್ದ ಕ್ಲಬ್‌ಅನ್ನು ಬಿಟ್ಟು ಹೋಗುತ್ತಿದ್ದೇನೆ. ಈ ಕ್ರೀಡೆಯೇ (ಫುಟ್‌ಬಾಲ್‌) ನನ್ನ ಪ್ಯಾಷನ್‌’ ಎಂದು ಭಾವುಕ ನುಡಿಗಳನ್ನಾಡಿದ್ದಾರೆ.


ಮಾಧ್ಯಮಗೋಷ್ಠಿಯಲ್ಲಿ ಡೆನಿಯಲ್‌ ಡಿ ರೊಸ್ಸಿ

‘ಇಟಲಿಯಲ್ಲಿ ನಾನು ಫುಟ್‌ಬಾಲ್‌ ಸಂಬಂಧ ಕಾರ್ಯಗಳಲ್ಲಿ ಮುಂದುವರಿಸಲಿದ್ದೇನೆ. ಆದರೆ ಯಾವ ಪಾತ್ರ ನಿರ್ವಹಿಸಲಿದ್ದೇನೆ ಎಂಬುದು ಗೊತ್ತಿಲ್ಲ’ ಎಂದೂ ತಿಳಿಸಿದ್ದಾರೆ. 

ಇಟಲಿ ತಂಡದ ಪರ 2004–17ರ ಅವಧಿಯಲ್ಲಿ 117 ಪಂದ್ಯ ಆಡಿರುವ ಮಿಡ್ಲ್‌ ಫೀಲ್ಡರ್‌, 2006ರಲ್ಲಿ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಾತ್ರವಲ್ಲದೆ ಸುದೀರ್ಘ 18 ವರ್ಷಗಳ (2001–2019) ಕಾಲ ರೋಮಾ ಕ್ಲಬ್‌ ಪರ ಆಡಿದ್ದರು.

ಕಳೆದ ವರ್ಷ ರೋಮಾದಿಂದ ಹೊರಬಂದಿದ್ದ ಡೆನಿಯಲ್‌, ಬೋಕಾ ಕ್ಲಬ್‌ ಕೂಡಿಕೊಂಡಿದ್ದರು. ಆ ವೇಳೆ ಅವರು, ನಾನು ಬೋಕಾ ಪರ ಆಡದೆ ನನ್ನ ವೃತ್ತಿ ಜೀವನವನ್ನು ಮುಗಿಸಲಾರೆ’ ಎಂದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು