ಬೆಂಗಳೂರು: ಎರಡು ವರ್ಷಗಳಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಮುಖ್ಯ ಕೋಚ್ ಆಗಿದ್ದ ಜೆರಾರ್ಡ್ ಝಾರ್ಗೋಝಾ ಅವರು ಪರಸ್ಪರ ಸಮ್ಮತಿ ಮೇರೆಗೆ ಕ್ಲಬ್ ತೊರೆದಿದ್ದಾರೆ.

ತಂಡ ಸಹಾಯಕ ಕೋಚ್ ಸೆಬಾಸ್ಟಿಯನ್ ವೇಗಾ ಹಾಗೂ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಅಯೋನಿಸ್ ಗ್ಕಿಯೋಕಾಸ್ ಅವರೂ ತಕ್ಷಣದಿಂದ ಜಾರಿಗೆ ಬರುವಂತೆ ಬಿಎಫ್ಸಿಯಿಂದ ಬೇರ್ಪಟ್ಟಿದ್ದಾರೆ. ಇದನ್ನು ಶುಕ್ರವಾರ ಬಿಎಫ್ಸಿ ಖಚಿತಪಡಿಸಿದೆ.

‘ಬೆಂಗಳೂರು ಎಫ್ಸಿ ತಂಡದೊಂದಿಗೆ ಕಳೆದ ಸಮಯಕ್ಕಾಗಿ ಜೆರಾರ್ಡ್ ಮತ್ತು ಅವರ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇವೆ. ಹೊಸ ಸವಾಲನ್ನು ಎದುರು ನೋಡುತ್ತಿರುವ ಅವರಿಗೆ ಶುಭ ಹಾರೈಕೆಗಳು’ ಬಿಎಫ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ತಂಡದ ಸಹಾಯಕ ಕೋಚ್ ಆಗಿರುವ ರೆನೆಡಿ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಂತರ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.

ಜೆರಾರ್ಡ್ ಮಾರ್ಗದರ್ಶನದಲ್ಲಿ ಬಿಎಫ್ಸಿ ತಂಡವು ಈಚೆಗೆ ಎಐಎಫ್ಎಫ್ ಸೂಪರ್ ಕಪ್ ಟೂರ್ನಿಯಲ್ಲಿ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ (2–0) ಮತ್ತು ಗೋಕುಲಂ ಕೇರಳ (4–0) ವಿರುದ್ಧ ಗೆಲುವು ಸಾಧಿಸಿತ್ತು. ಆದರೆ, ಪಂಜಾಬ್ ಎಫ್ಸಿ ವಿರುದ್ಧ (4-5) ಪೆನಾಲ್ಟಿ ಶೂಟೌಟ್ನಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು.

ಸ್ಪೇನ್ನ 43 ವರ್ಷದ ಜೆರಾರ್ಡ್ ಅವರು 2023ರ ಡಿಸೆಂಬರ್ನಲ್ಲಿ ಬಿಎಫ್ಸಿಯ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡವು 2024-25ರ ಐಎಸ್ಎಲ್ ಋತುವಿನಲ್ಲಿ ರನ್ನರ್ಸ್ ಅಪ್ ಆಗಿತ್ತು. ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ತಂಡವು ಫೈನಲ್ನಲ್ಲಿ 1–2ರಿಂದ ಮೋಹನ್ ಬಾಗನ್ ವಿರುದ್ಧ ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.