ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಅನುಭವಿ ಆಟಗಾರನ ಹೆಗಲಿಗೆ ಹೊಸ ಜವಾಬ್ದಾರಿ

ಕ್ರಿಸ್‌ ಗೇಲ್‌ ಉಪನಾಯಕ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಆಂಟಿಗಾ: ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ವೆಸ್ಟ್‌ ಇಂಡೀಸ್‌ ತಂಡದ ಉಪನಾಯಕ ಸ್ಥಾನವನ್ನು ಕ್ರಿಸ್‌ ಗೇಲ್‌ ಅವರಿಗೆ ವಹಿಸಲಾಗಿದೆ. ಜೇಸನ್‌ ಹೋಲ್ಡರ್‌ ನಾಯಕನಾಗಿದ್ದಾರೆ.

39 ವರ್ಷದ ಗೇಲ್‌ಗೆ ಇದು ಐದನೇ ವಿಶ್ವಕಪ್‌ ಟೂರ್ನಿ. ವಿಂಡೀಸ್‌ ಪರ 289 ಏಕದಿನ ಪಂದ್ಯಗಳನ್ನು ಆಡಿರುವ ಈ ಸ್ಫೋಟಕ ಆಟಗಾರ 10151 ರನ್‌ ಗಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದಲ್ಲಿ ಆಡಿದ್ದ ಗೇಲ್‌ 13 ಪಂದ್ಯಗಳಿಂದ 490ರನ್‌ ಗಳಿಸಿ ಗಮನ ಸೆಳೆದಿದ್ದರು. ಅಜೇಯ 99ರನ್‌ ಬಾರಿಸಿದ್ದರು.

ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಶಾಯಿ ಹೋಪ್‌ ಐರ್ಲೆಂಡ್‌ನಲ್ಲಿ ನಡೆಯು ತ್ತಿರುವ ತ್ರಿಕೋನ ಸರಣಿಯಲ್ಲಿ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬಾಂಗ್ಲಾ ಕೂಡ ಈ ಸರಣಿಯಲ್ಲಿ ಆಡುತ್ತಿದೆ.

ನೊರ್ಜೆ ಸ್ಥಾನಕ್ಕೆ ಕ್ರಿಸ್‌ ಮಾರಿಸ್: ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರು ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡಕ್ಕೆ ಸೇ‍ರ್ಡೆಯಾಗಿದ್ದಾರೆ. ಗಾಯಗೊಂಡ ವೇಗಿ ಆನ್ರಿಚ್‌ ನೊರ್ಜೆ ಬದಲಿಗೆ ಅವರಿಗೆ ಸ್ಥಾನ ನೀಡಲಾಗಿದೆ.

ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ನೊರ್ಜೆ ಬಲಗೈ ಬೆರಳಿಗೆ ಗಾಯವಾಗಿತ್ತು. ಸಂಪೂರ್ಣ ಗುಣಮುಖವಾಗಲು ಅವರಿಗೆ ಕೆಲವು ವಾರ ಬೇಕಾಗುತ್ತವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ತಿಳಿಸಿದೆ.

ಮಾರಿಸ್ 2018ರ ಫೆಬ್ರುವರಿ ಯಿಂದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಟ್ವೆಂಟಿ–20 ಟೂರ್ನಿಗಳಲ್ಲಿ ಆಡಿದ್ದಾರೆ. ವಿಶ್ವಕಪ್ ಮುಂದಿರುವಂತೆ ಆಟಗಾರರ ಅದ ರಲ್ಲೂ ವಿಶೇಷವಾಗಿ ಬೌಲರ್‌ಗಳ ಗಾಯದ ಸಮಸ್ಯೆ ಆಫ್ರಿಕಾ ತಂಡಕ್ಕೆ ತಲೆನೋವಾಗಿದೆ.

ಲುಂಗಿ ಗಿಡಿ, ಕಗಿಸೊ ರಬಾಡ ಹಾಗೂ ಡೇಲ್‌ ಸ್ಟೇನ್‌ ಗಾಯಕ್ಕೆ ಒಳಗಾಗಿದ್ದಾರೆ. ಈ ಮೂವರು ಶೀಘ್ರ ಫಿಟ್ನೆಸ್ ಸಾಬೀತುಪಡಿಸದಿದ್ದಲ್ಲಿ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.