ಭೋಪಾಲ್: ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದ ಎಸ್.ಪಿ.ಲಿಖಿತ್ ಇಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

50 ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಮೊದಲಿಗರಾದ ಅವರು ನಂತರ ಶ್ರೀಹರಿ ನಟರಾಜ್, ಸುವನಾ ಸಿ ಭಾಸ್ಕರ್ ಮತ್ತು ದೀಕ್ಷಾ ರಮೇಶ್ ಜೊತೆಗೂಡಿ 4x50 ಮೀ ಮಿಡ್ಲೆ ರಿಲೆಯಲ್ಲಿ ಚಿನ್ನ ಗೆದ್ದರು.

ವೈಯಕ್ತಿಕ ಸ್ಪರ್ಧೆಯಲ್ಲಿ 28.54 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಲಿಖಿತ್ ಉತ್ತರ ಪ್ರದೇಶದ ಅಂಶ್ ಅರೋರಾ ಮತ್ತು ತಮಿಳುನಾಡಿನ ಧನುಷ್ ಅವರನ್ನು ಹಿಂದಿಕ್ಕಿದರು. ರಿಲೆಯಲ್ಲಿ ಕರ್ನಾಟಕ ತಂಡ 1 ನಿಮಿಷ 50.65 ಸೆಕೆಂಡುಗಳಲ್ಲಿ ಗುರಿ ತಲುಪಿ 2 ವರ್ಷಗಳ ಹಿಂದೆ ರೈಲ್ವೇಸ್ ಮಾಡಿದ ದಾಖಲೆಯನ್ನು ಮುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.