ಅಮ್ಮಾನ್ (ಜೋರ್ಡಾನ್): ಜೂನಿಯರ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಾಲಕಿಯರ ವಿಭಾಗದಲ್ಲಿ ಆರು ಮಂದಿ ಸೇರಿದಂತೆ ಇನ್ನೂ ಏಳು ಮಂದಿ ಬಾಕ್ಸರ್ಗಳು 17 ವರ್ಷದೊಳಗಿನವರ ವಿಭಾಗದ ವಿವಿಧ ತೂಕ ವಿಭಾಗಗಳಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.

ಭಾರತ ಇಲ್ಲಿಯವರೆಗೆ 43 ಪದಕಗಳನ್ನು ಗೆದ್ದಿದೆ. ಈಗ 15 ಮತ್ತು 17 ವರ್ಷದೊಳಗಿನವರ ವಿಭಾಗದಲ್ಲಿ 21 ಮಂದಿ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.

17 ವರ್ಷದೊಳಗಿನವರ ವಿಭಾಗದಲ್ಲಿ ಅಹನಾ ಶರ್ಮಾ (50 ಕೆ.ಜಿ ಸ್ಪರ್ಧೆ) ಭಾನುವಾರ ಕಿರ್ಗಿಸ್ತಾನದ ಅಕ್ಮರಾಲ್ ಅಮನಟಯಿವಾ ಅವರ ಮೇಲೆ ಮೊದಲ ಸುತ್ತಿನಲ್ಲೇ ನಾಕೌಟ್ ಜಯ ಸಂಪಾದಿಸಿ ಫೈನಲ್ ತಲುಪಿದರು.

ಖುಷಿ ಚಾಂದ್ (44–46 ಕೆ.ಜಿ) ಅವರು ಉಕ್ರೇನ್ನ ಒಲೆಕ್ಸಾಂಡ್ರಾ ಚೆರೆವಟಾ ಅವರನ್ನು 3–2 ರಿಂದ ಸೋಲಿಸಿದರೆ, ಜನ್ನತ್ (54 ಕೆ.ಜಿ), ಸಿಮ್ರನ್ಜೀತ್ ಕೌರ್ (60 ಕೆ.ಜಿ), ಹರ್ಷಿಕಾ (63 ಕೆ.ಜಿ) ಮತ್ತು ಅನ್ಶಿಕಾ (80+ ಕೆ.ಜಿ) ಅವರೂ ಎದುರಾಳಿಗಳ ವಿರುದ್ಧ ಅಧಿಕಾರಯುತ ಜಯಗಳಿಸಿ ಫೈನಲ್ ತಲುಪಿದ್ದಾರೆ.

17 ವರ್ಷದೊಳಗಿನವರ ವಿಭಾಗದಲ್ಲಿ ದೇವಾಂಶ್ (80 ಕೆ.ಜಿ) ಉತ್ತಮ ಪ್ರದರ್ಶನ ನೀಡಿ ವಿಯೆಟ್ನಾಮಿನ ನೂಯೆನ್ ಟ್ರಾಂಗ್ ಟಿಯನ್ ಅವರನ್ನು 4–1 ರಿಂದ ಸೋಲಿಸಿ ಫೈನಲ್ ತಲುಪಿದರು.

ಏಷ್ಯನ್ ಬಾಕ್ಸಿಂಗ್ ಆಯೋಜಿಸುತ್ತಿರುವ ಮೊದಲ ಕೂಟ ಇದಾಗಿದೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವರ್ಲ್ಡ್ ಬಾಕ್ಸಿಂಗ್ ಮಾನ್ಯತೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.