ಬೆಂಗಳೂರು: ಒಲಿಂಪಿಯನ್ಗಳಾದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಗು ಸೇರಿದಂತೆ 33 ಮಂದಿಯ ರಾಜ್ಯ ತಂಡವನ್ನು ಇದೇ 22ರಿಂದ 26ರವರೆಗೆ ನಡೆಯಲಿರುವ 78ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ಗೆ ಕರ್ನಾಟಕ ಈಜು ಸಂಸ್ಥೆ ಪ್ರಕಟಿಸಿದೆ.

ಭಾರತ ಈಜು ಫೆಡರೇಷನ್ನ ಆಶ್ರಯದಲ್ಲಿ ಒಡಿಶಾದ ಕಳಿಂಗಾ ಕ್ರೀಡಾಂಗಣದ ಅಕ್ವಟಿಕ್ ಕಾಂಪ್ಲೆಕ್ಸ್ನಲ್ಲಿ ಐದು ದಿನ ಕೂಟ ನಡೆಯಲಿದೆ. ಈ ಚಾಂಪಿಯನ್ಷಿಪ್ ಮೂರನೇ ಏಷ್ಯನ್ ಯೂತ್ ಗೇಮ್ಸ್ ಮತ್ತು ಜೂನಿಯರ್ ವಿಶ್ವ ಚಾಂಪಿಯನ್ಷಿಪ್ಗೆ ಆಯ್ಕೆ ಟ್ರಯಲ್ಸ್ ಆಗಿರುತ್ತದೆ.

ಮಹಿಳೆಯರ ಮತ್ತು ಪುರುಷರ ವೈಯಕ್ತಿಕ ವಿಭಾಗಗಳಲ್ಲಿ ಫ್ರೀಸ್ಟೈಲ್, ಬ್ಯಾಕ್ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್, ಮೆಡ್ಲೆ ಸ್ಪರ್ಧೆಗಳು ಇರಲಿದೆ. ತಂಡ ವಿಭಾಗಗಳಲ್ಲಿ ಫ್ರೀಸ್ಟೈಲ್ ರಿಲೆ, ಮೆಡ್ಲೆ ರಿಲೆ ಹಾಗೂ ಮಿಶ್ರ ರಿಲೆ ಸ್ಪರ್ಧೆಗಳು ಇವೆ.

77ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ಕಳೆದ ವರ್ಷ ಮಂಗಳೂರಿನಲ್ಲಿ ನಡೆದಿದ್ದು, 17 ಚಿನ್ನ ಸೇರಿದಂತೆ ಒಟ್ಟು 33 ಪದಕಗಳೊಂದಿಗೆ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅನೀಶ್ ಎಸ್. ಗೌಡ ಮತ್ತು ಹಾಶಿಕಾ ರಾಮಚಂದ್ರ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿದ್ದರು.

ರಾಜ್ಯ ತಂಡ: ಪುರುಷರು: ಆಕಾಶ್ ಮಣಿ, ಅನೀಶ್ ಎಸ್. ಗೌಡ, ದರ್ಶನ್ ಎಸ್., ದಕ್ಷಣ್ ಎಸ್., ಮಣಿಕಂಠ ಎಲ್., ಪೃಥ್ವಿ ಎಂ, ಪೃಥ್ವಿಕ್ ಡಿ.ಎಸ್., ಶಿವ ಶ್ರೀಧರ್, ಶಿವಾಂಕ್ ವಿಶ್ವನಾಥ್, ಶೋನ್ ಗಂಗೂಲಿ, ಸೂರ್ಯ ಜೋಯಪ್ಪ, ತನೀಶ್ ಜಾರ್ಜ್ ಮ್ಯಾಥ್ಯೂ, ಉತ್ಕರ್ಷ್ ಎಸ್.ಪಾಟೀಲ, ಶ್ರೀಹರಿ ನಟರಾಜ್, ವಿಧಿತ್ ಎಸ್.ಶಂಕರ್, ಚಿಂತನ್ ಎಸ್. ಶೆಟ್ಟಿ.

ಮಹಿಳೆಯರು: ಅದಿತಿ ಎನ್. ಮುಲೈ, ಅಶ್ಮಿತಾ ಚಂದ್ರ, ಲಕ್ಷ್ಯಾ ಎಸ್., ಮೀನಾಕ್ಷಿ ಮೆನನ್, ನೈಶಾ, ಶಿರಿನ್, ವಿಹಿತಾ ನಯನಾ, ಧಿನಿಧಿ ದೇಸಿಂಗು, ಮಾನವಿ ವರ್ಮಾ, ನಿನಾ ವೆಂಕಟೇಶ್, ಋತುಜಾ ಎಸ್, ಶಾಲಿನಿ ಎಸ್. ದೀಕ್ಷಿತ್, ಸುಹಾನಿಸಿ ಘೋಷ್, ಜೇಡಿದಾ ಎ., ತ್ರಿಶಾ ಸಿಂಧು ಎಸ್., ತಾನ್ಯಾ ಎಸ್., ಲತೀಶಾ ಮಂದಣ್ಣ.

ನೆರವು ಸಿಬ್ಬಂದಿ: ಜಾನ್ ಕ್ರಿಸ್ಟೋಪರ್ (ಮ್ಯಾನೇಜರ್), ರಾಜೀವ್ ಆರ್.ಎಸ್., ನಟರಾಜ್ ವಿ., ಬಿನೇಶ್, ಜಯರಾಜನ್ ಎ.ಸಿ. (ಎಲ್ಲರೂ ಕೋಚ್ಗಳು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.