ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರೋಧಿ ಘೋಷಣೆಗೆ ಪ್ರತಿಕ್ರಿಯಿಸಿದ್ದೆ: ಗಂಭೀರ್‌

Published 4 ಸೆಪ್ಟೆಂಬರ್ 2023, 20:34 IST
Last Updated 4 ಸೆಪ್ಟೆಂಬರ್ 2023, 20:34 IST
ಅಕ್ಷರ ಗಾತ್ರ

ಪಲ್ಲೆಕೆಲೆ: ಭಾರತ –ಪಾಕಿಸ್ತಾನ ನಡುವಣ ಏಷ್ಯಾ ಕಪ್‌ ಪಂದ್ಯದ ವೇಳೆ ಪ್ರೇಕ್ಷಕರತ್ತ ಅಶ್ಲೀಲ ಸಂಜ್ಞೆ ತೋರಿಸಿದ್ದ (ಮಧ್ಯದ ಬೆರಳು ಎತ್ತಿ) ಮಾಜಿ ಬ್ಯಾಟರ್‌ ಗೌತಮ್‌ ಗಂಭೀರ್‌, ‘ಭಾರತ ವಿರೋಧಿ ಘೋಷಣೆ ಕೂಗಿದ ಪ್ರೇಕ್ಷಕರನ್ನು ಗುರಿಯಾಗಿಸಿ ಆ ರೀತಿ ಪ್ರತಿಕ್ರಿಯಿಸಿದ್ದೆ’ ಎಂದಿದ್ದಾರೆ.

ಗಂಭೀರ್‌ ಅವರು ಮಧ್ಯದ ಬೆರಳು ಎತ್ತಿ ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ‘ಕೊಹ್ಲಿ, ಕೊಹ್ಲಿ’ ಎಂದು ಕೂಗಿದ ವಿರಾಟ್‌ ಕೊಹ್ಲಿ ಅಭಿಮಾನಿಗಳತ್ತ ಅವರು ಅಶ್ಲೀಲ ಸಂಜ್ಞೆ ತೋರಿಸಿದ್ದಾರೆ ಎಂದು ಕೆಲವರು ಬರೆದುಕೊಂಡಿದ್ದರು.

ಅದಕ್ಕೆ ಸ್ಪಷ್ಟನೆ ನೀಡಿರುವ ಗಂಭೀರ್‌, ‘ಸಾಮಾಜಿಕ ಮಾಧ್ಯಮಗಳಲ್ಲಿ ಜನರು ತಮಗೆ ಬೇಕಾದಷ್ಟನ್ನು ಮಾತ್ರ ತೋರಿಸುತ್ತಾರೆ. ಪ್ರೇಕ್ಷಕರಲ್ಲಿ ಕೆಲವರು ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದರು. ಆಗ ಸಹಜವಾಗಿ ತಕ್ಕ ಪ್ರತಿಕ್ರಿಯೆ ನೀಡಬೇಕಾಗಿ ಬಂದಿತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT