ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತಕ್ಕೆ ಇಂದು ಆಸ್ಟ್ರೇಲಿಯಾ ಸವಾಲು

Published 14 ಫೆಬ್ರುವರಿ 2024, 16:11 IST
Last Updated 14 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಬೆನ್ನುಬೆನ್ನಿಗೆ ಎರಡು ಪಂದ್ಯಗಳಲ್ಲಿ ಜಯಗಳಿಸಿರುವ ಭಾರತ ಪುರುಷರ ತಂಡವು ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಹೆಚ್ಚಿನ ವಿಶ್ವಾಸದಿಂದ ಎದುರಿಸಲಿದೆ.

ಮೊದಲ ಪಂದ್ಯದಲ್ಲಿ 4–1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿದ್ದ ಭಾರತ, ನಂತರ ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರಮಾನ್ಯ ತಂಡ ನೆದರ್ಲೆಂಡ್ಸ್ ವಿರುದ್ಧ ಶೂಟೌಟ್‌ನಲ್ಲಿ 4–2 ಗೋಲುಗಳಿಂದ (ನಿಗದಿ ಅವಧಿಯ ಆಟದಲ್ಲಿ 2–2) ಜಯಗಳಿಸಿತ್ತು.

ಈ ಹಿಂದಿನ ಮುಖಾಮುಖಿಯ ಅಂಶಗಳು ಆಸ್ಟ್ರೇಲಿಯಾ ಪರ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿದೆ. ಕಳೆದ ಪ್ರೊ ಲೀಗ್‌ನಲ್ಲಂತೂ ಭಾರತ ಗಮನಾರ್ಹ ಪ್ರದರ್ಶನ ನೀಡಿತ್ತು.

ಆಸ್ಟ್ರೇಲಿಯಾ ಕೂಡ ಎರಡು ಗೆಲುವುಗಳೊಡನೆ ಈ ಪಂದ್ಯ ಆಡಲು ಇಳಿಯಲಿದೆ. ಅದು 4–3 ರಿಂದ ಸ್ಪೇನ್ ವಿರುದ್ಧ, 5–0 ಯಿಂದ ಐರ್ಲೆಂಡ್ ವಿರುದ್ಧ ಜಯಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT