ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್: ಲಿಖಿತ್, ಹರ್ಷಿಕಾಗೆ ಚಿನ್ನ

ಮತ್ತೆ ಮಿಂಚಿದ ಶ್ರೀಹರಿ
Published 26 ನವೆಂಬರ್ 2023, 20:18 IST
Last Updated 26 ನವೆಂಬರ್ 2023, 20:18 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದಲ್ಲಿ ಈಚೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಲಿಖಿತ್ ಎಸ್‌.ಪಿ ಇಲ್ಲಿ ನಡೆದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜುಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನ ಡಬಲ್ ಸಾಧನೆ ಮಾಡಿದರು. ಮಹಿಳೆಯರ ವಿಭಾಗದಲ್ಲಿ ಹರ್ಷಿತಾ ಜಯರಾಮ್ ಕೂಡ ಸ್ವರ್ಣ ಸಂಭ್ರಮ ಆಚರಿಸಿದರು.

ಆತಿಥೇಯ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ (ಎನ್‌ಎಸಿ) ಪ್ರತಿನಿಧಿಸುವ ಲಿಖಿತ್ 100 ಮೀ ಬ್ರೆಸ್ಟ್‌ಸ್ಟ್ರೋಕ್ ಮತ್ತು 50 ಮೀ ಬ್ರೆಸ್ಟ್‌ಸ್ಟ್ರೋಕ್‌ ಸ್ಕಿನ್ಸ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಜಯಿಸಿದರು. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಅವರು ಎಸ್. ಸುನೀಶ್ ಮತ್ತು ಮಣಿಕಂಠ ಲಕ್ಷ್ಮಣ್ ಸವಾಲು ಮೀರಿದರು.

ಸ್ಕಿನ್ಸ್‌ನಲ್ಲಿ ಅವರಿಗೆ ವಿದಿತ್ ಎಸ್. ಶಂಕರ್ ಮತ್ತು ಎಸ್ ಸುನೀಶ್ ನಿಕಟ ಪೈಪೋಟಿಯೊಡ್ಡಿದರು. ಲಿಖಿತ್, ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ 100 ಮೀ ಬ್ರೆಸ್ಟ್‌ಸ್ಟ್ರೋಕ್‌ ಫೈನಲ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದರು.

ಮಹಿಳೆಯರ ವಿಭಾಗದ ಹರ್ಷಿತಾ ಜಯರಾಮ್  ಅವರು 100 ಮೀ ಬ್ರೆಸ್ಟ್‌ಸ್ಟ್ರೋಕ್‌ ಮತ್ತು 50 ಮೀ ಸ್ಕಿನ್ಸ್‌ನಲ್ಲಿ ಮೊದಲಿಗರಾದರು. 100 ಮೀ ಫ್ರೀಸ್ಟೈಲ್‌ನಲ್ಲಿಯೂ ಹರ್ಷಿತಾ ಪಾರಮ್ಯ ಮೆರೆದರು.

ಶ್ರೀಹರಿ, ಸಜನ್‌ ಮಿಂಚು: ಒಲಿಂಪಿಯನ್ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಸಜನ್ ಪ್ರಕಾಶ್ ಅವರ ಪದಕ ಬೇಟೆ ಸ್ಪರ್ಧೆಯ ಕೊನೆಯ ದಿನವೂ ನಡೆಯಿತು.

ಪುರುಷರ 50 ಮೀ ಫ್ರೀಸ್ಟೈಲ್ ಸ್ಕಿನ್ಸ್‌ನಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ಶ್ರೀಹರಿ ನಟರಾಜ್ ಪ್ರಥಮ ಹಾಗೂ ಸಜನ್ ಪ್ರಕಾಶ್ ದ್ವಿತೀಯ ಸ್ಥಾನ ಪಡೆದರು.

ಫಲಿತಾಂಶಗಳು

ಪುರುಷರು: 100 ಮೀ ಬ್ರೆಸ್ಟ್‌ಸ್ಟ್ರೋಕ್: ಲಿಖಿತ್ ಎಸ್‌.ಪಿ (ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್; 1ನಿ,04.15ಸೆ)–1, ಎಸ್‌. ಸುನೀಶ್ (ಜಿಎಸ್‌ಸಿ; 1ನಿ,–6.19ಸೆ)–2, ಮಣಿಕಂಠ ಲಕ್ಷ್ಮಣ್ (ಬಿಎಸಿ;1ನಿ,7.99ಸೆ)–3

400 ಮೀ ಫ್ರೀಸ್ಟೈಲ್: ಶಿವಾಂಕ್ ವಿಶ್ವನಾಥ್ (ಬಿಎಸಿ; 4ನಿ,10.30ಸೆ)–1, ಅನಿಕೇತ್ ಚವ್ವಾಣ್ (ಡಾಲ್ಫಿನ್; 4ನಿ,23.84ಸೆ)–2, ಧ್ಯಾನ್ ಬಾಲಕೃಷ್ಣ (ಬಿಎಸಿ;4ನಿ,25.90ಸೆ)–3

50 ಮೀ ಬ್ರೆಸ್ಟ್‌ಸ್ಟ್ರೋಕ್, ಸ್ಕಿನ್ಸ್‌: ಎಸ್‌.ಪಿ. ಲಿಖಿತ್ (ಎನ್‌ಎಸಿ; 28.40ಸೆ)–1, ವಿದಿತ್ ಎಸ್ ಶಂಕರ್ (ಡಾಲ್ಫಿನ್;29.02ಸೆ)–2, ಎಸ್‌. ಸುನೀಶ್ (ಜಿಎಸ್‌ಸಿ; 30.16ಸೆ)–3: 100 ಮೀ ಫ್ರೀಸ್ಟೈಲ್: ಎ.ಎಸ್. ಆನಂದ್ (ಡಾಲ್ಫಿನ್; 53.03ಸೆ)–1, ಝೇವಿಯರ್ ಡಿಸೋಜಾ (ಜೈನ್ ವಿವಿ; 54.02ಸೆ)–2, ಎಸ್. ಉನ್ನಿಕೃಷ್ಣನ್ (ಜಿಎಸ್‌ಸಿ; 54.75ಸೆ)–3: 50 ಮೀ ಫ್ರೀಸ್ಟೈಲ್ ಸ್ಕಿನ್ಸ್: ಶ್ರೀಹರಿ ನಟರಾಜ್ (ಡಾಲ್ಫಿನ್;23.06ಸೆ)–1, ಸಜನ್ ಪ್ರಕಾಶ್ (ಬಿಎಸಿ; 23.52ಸೆ)–2, ಝೇವಿಯರ್ ಡಿಸೋಜಾ (ಜೈನ್ ವಿವಿ; 25.28ಸೆ)–3:

ಗುಂಪು ಒಂದು: 100 ಮೀ ಬ್ರೆಸ್ಟ್‌ಸ್ಟ್ರೋಕ್: ಅಭಿನಂದನ್ ಖಂಡೇಲವಾಲ (ಡಾಲ್ಫಿನ್; 1ನಿ,08.52ಸೆ)–1, ವಿದಿತ್ ಎಸ್ ಶಂಕರ್ (ಡಾಲ್ಫಿನ್; 1ನಿ,08.64ಸೆ)–2, ಶ್ರೇಯಸ್ ಮಂಜುನಾಥ್ (ಬಿಎಸಿ; 1ನಿ,11.91ಸೆ)–3

100 ಮೀ ಫ್ರೀಸ್ಟೈಲ್: ಕಾರ್ತಿ ಕೇಯನ್ ನಾಯರ್ (ಡಾಲ್ಫಿನ್; 54.47ಸೆ)–1, ಆಕಾಶ್ ಮಣಿ (ಬಿಎಸಿ; 54.51ಸೆ)–2, ರಿಷಭ್ ಸಿಂಗ್ ಧಡವಾಲ್ (ಡಾಲ್ಫಿನ್; 55.24ಸೆ)–3 

ಗುಂಪು ಎರಡು: 200 ಮೀ ವೈಯಕ್ತಿಕ ಮೆಡ್ಲೆ: ಪೃಥ್ವಿರಾಜ್ ಮೆನನ್ (ಬಿಎಸಿ;2ನಿ, 22.39ಸೆ)–1, ಅಕ್ಷಜ್ ಠಾಕೂರಿಯಾ (ಡಾಲ್ಫಿನ್;2ನಿ,22.40ಸೆ)–2, ಮೊನಿಷ್ ಪಿ.ವಿ. (ಬಿಎಸಿ;2ನಿ,26.99ಸೆ)–3: 100 ಮೀ ಬ್ರೆಸ್ಟ್‌ಸ್ಟ್ರೋಕ್: ಆಯುಷ್ ಶಿವರಾಜು ಮೇಗನಹಳ್ಳಿ (ಡಾಲ್ಫಿನ್; 1ನಿ,11.22ಸೆ)–1, ಡ್ಯಾನಿಲ್ ಪಾಲ್ (ಬಿಎಸಿ; 1ನಿ,15.10ಸೆ)–2, ದಕ್ಷ್ ಮಟ್ಟಾ (ಬಿಎಸಿ; 1ನಿ,19.59ಸೆ)–3:

200 ಮೀ ಫ್ರೀಸ್ಟೈಲ್: ಇದಾಂತ್ ಚತುರ್ವೇದಿ (ಪಿ.ಎಂ. ಈಜುಕೇಂದ್ರ; 2ನಿ,06.82ಸೆ)–1, ಮೊನಿಷ್ ಪಿವಿ (ಬಿಎಸಿ;2ನಿ,06.83ಸೆ)–2, ಅಕ್ಷಜ್ ಠಾಕೂರಿಯಾ (ಡಾ‌ಲ್ಫಿನ್; 2ನಿ, 7.01ಸೆ)–3: 100 ಮೀ ಫ್ರೀಸ್ಟೈಲ್: ಮೊನಿಷ್ ಪಿವಿ (ಬಿಎಸಿ; 57.19ಸೆ)–1, ಅಕ್ಷಜ್ ಠಾಕೂರಿಯಾ (ಡಾಲ್ಫಿನ್; 57.47ಸೆ)–2, ಇದಾಂತ್ ಚತುರ್ವೇದಿ (ಪಿಎಂ ಈಜುಕೇಂದ್ರ; 57.76ಸೆ)–3

ಮಹಿಳೆಯರು: 100 ಮೀ ಬ್ರೆಸ್ಟ್‌ಸ್ಟ್ರೋಕ್: ಹರ್ಷಿತಾ ಜಯರಾಮ್ (ಜಿಎಸ್‌ಸಿ;1ನಿ,20.97ಸೆ)–1, ಝರಾ ವಿಲಿಯಮ್ಸ್ (ಡಾಲ್ಫಿನ್; 1ನಿ,21.98ಸೆ)–2, ಶೃಂಗಿ ರಾಜೇಶ್ ಬಾಂದೆಕರ್ (ಜೈನ್ ವಿವಿ;1ನಿ,30.81ಸೆ)–3. 400 ಮೀ ಫ್ರೀಸ್ಟೈಲ್: ಅನುಮತಿ ಚೌಗುಲೆ (ಬಿಎಸಿ; 4ನಿ,56.42ಸೆ)–1, ಅನ್ನಾ ಸ್ಪೂರ್ತಿ ತೆರೇಸಾ (ಬಿಎಸಿ; 5.12.88ಸೆ)–2, ತಿತೀಕ್ಷಾ ಹನುಮಂತರಾಜು (ಜಿಎಸ್‌ಸಿ; 5ನಿ,19.69ಸೆ)–3. 50 ಮೀ ಬ್ರೆಸ್ಟ್‌ಸ್ಟ್ರೋಕ್ ಸ್ಕಿನ್ಸ್: ಹರ್ಷಿತಾ ಜಯರಾಮ್ (ಜಿಎಸ್‌ಸಿ; 34.73ಸೆ)–1, ಎಸ್. ತಾನ್ಯಾ (ಡಾಲ್ಫಿನ್; 35ಸೆ)–2, ಅನುಷ್ಕಾ ಎಸ್ ಪಾಟೀಲ (ಡಾಲ್ಫಿನ್; 35.75ಸೆ)–3. 100 ಮೀ ಫ್ರೀಸ್ಟೈಲ್: ಹರ್ಷಿತಾ ಜಯರಾಮ್ (ಜಿಎಸ್‌ಸಿ;1ನಿ,04.75ಸೆ)–1, ಕೆ.ಆರ್. ಧ್ರುತಿ (ಜಿಎಸ್‌ಸಿ; 1ನಿ,04.76ಸೆ)–2, ಅನುಮತಿ ಚೌಗುಲೆ (ಬಿಎಸಿ; 1ನಿ,05.27ಸೆ)–3. 50 ಮೀ ಫ್ರೀಸ್ಟೈಲ್ ಸ್ಕಿನ್ಸ್: ವಿನಿತಾ ನಯನಾ (ಬಿಎಸಿ; 27.79ಸೆ)–1, ಎಸ್‌. ಋಜುಲಾ (ಡಾಲ್ಫಿನ್; 27.91ಸೆ)–2, ಶಾಲಿನಿ ಆರ್ ದಿಕ್ಷಿತ್ (ಡಾಲ್ಫಿನ್; 28.09ಸೆ)–3

ಗುಂಪು 1: 100 ಮೀ ಬ್ರೆಸ್ಟ್‌ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ; 1ನಿ,17.60ಸೆ)–1, ಅನುಷ್ಕಾ ಎಸ್ ಪಾಟೀಲ (ಡಾಲ್ಫಿನ್; 1ನಿ,20.41ಸೆ)–2, ಚಾರು ಹಂಸಿನಿ ಎಸ್‌.ಪಿ (ಎನ್‌ಎಸಿ; 1ನಿ,23.94ಸೆ)–3. 100 ಮೀ ಫ್ರೀಸ್ಟೈಲ್: ಎಸ್‌. ಋಜುಲಾ (ಡಾಲ್ಫಿನ್; 1ನಿ,01.37ಸೆ)–1, ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್; 1ನಿ,02.68ಸೆ)–2 ಅದಿತಿ ಎನ್ ಮೂಲ್ಯಾ (ಬಿಎಸಿ; 1ನಿ,03.88ಸೆ)–3

ಗುಂಪು ಎರಡು: 200 ಮೀ ವೈಯಕ್ತಿಕ ಮೆಡ್ಲೆ: ಮೀನಾಕ್ಷಿ ಮೆನನ್ (ಬಿಎಸಿ; 2ನಿ,33.76ಸೆ)–1, ಎಸ್. ತಾನ್ಯಾ (ಡಾಲ್ಫಿನ್; 2ನಿ,33.81)–2, ನೈಷಾ (ಬಿಎಸಿ; 2ನಿ,36.24ಸೆ) –3

100 ಮಿ ಬ್ರೆಸ್ಟ್‌ಸ್ಟ್ರೋಕ್: ಎಸ್‌. ತಾನ್ಯಾ (ಡಾಲ್ಫಿನ್; 1ನಿ,16.77ಸೆ)–1, ತಿಸ್ಯಾ ಸೋನಾರ್ (ಪಿಎಂ ಈಜುಕೇಂದ್ರ; 1ನಿ,21.50ಸೆ)–2, ಶ್ರೀಚರಣಿ ತುಮು (ಜಿಎಸ್‌ಸಿ; 1ನಿ,24.23ಸೆ)–3. 200 ಮೀ ಫ್ರೀಸ್ಟೈಲ್: ಶ್ರೀಚರಣಿ ತುಮು (ಜಿಎಸ್‌ಸಿ; 2ನಿ,13.63ಸೆ)–1, ಮೀನಾಕ್ಷಿ ಮೆನನ್ (ಬಿಎಸಿ; 2ನಿ,14.93ಸೆ)–2, ನೈಷಾ (ಬಿಎಸಿ;2ನಿ, 16,34ಸೆ)–3: 100 ಮೀ ಫ್ರೀಸ್ಟೈಲ್: ಶ್ರೀಚರಣಿ ತುಮು (ಜಿಎಸ್‌ಸಿ; 1ನಿ,01.72ಸೆ)–1, ತಿಸ್ಯಾ ಸೋನಾರ್ (ಪಿಎಂ ಈಜುಕೇಂದ್ರ,  1ನಿ,02.64ಸೆ)–2, ನೈಶಾ (ಬಿಎಸಿ; 1ನಿ,04.05ಸೆ)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT