ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಅಥ್ಲೆಟಿಕ್ ಕೂಟ | ಅಂಬಿಕಾ ದಾಖಲೆ: ಅಭಿನ್‌, ಜ್ಯೋತಿಕಾಗೆ ಚಿನ್ನ

Published 6 ಜೂನ್ 2024, 15:43 IST
Last Updated 6 ಜೂನ್ 2024, 15:43 IST
ಅಕ್ಷರ ಗಾತ್ರ

ಉಡುಪಿ: ಮಳೆ ಸುರಿದು ಹಿತವಾಗಿದ್ದ ವಾತಾವರಣದಲ್ಲಿ ಭುಜಬಲ ತೋರಿದ ಮೈಸೂರಿನ ಸರಸ್ವತಿಪುರಂ ನಿವಾಸಿ ಅಂಬಿಕಾ ವಿ, ಇಲ್ಲಿನ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ದಾಖಲೆ ಉತ್ತಮಪಡಿಸಿ ನಗೆ ಸೂಸಿದರು.

ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ಆರಂಭಗೊಂಡ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಶಾಟ್‌ಪಟ್‌ನಲ್ಲಿ ಅವರು 14.70 ಮೀಟರ್ಸ್‌ ಸಾಧನೆಯೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ಕೂಟ ದಾಖಲೆ ಮುರಿದರು. ಮೈಸೂರಿನ ವೀನಸ್ ಥ್ರೋವರ್ಸ್‌ನ ಮೋಹನ್ ಕುಮಾರ್ ಬಳಿ ತರಬೇತಿ ಪಡೆಯುತ್ತಿರುವ ಅಂಬಿಕಾ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕೂಟದಲ್ಲಿ 14.04 ದೂರ ಎಸೆದು ದಾಖಲೆ ನಿರ್ಮಿಸಿದ್ದರು.

ಪುರುಷರ 200 ಮೀಟರ್ಸ್ ಓಟದಲ್ಲಿ ಉಡುಪಿಯ ಅಭಿನ್ ದೇವಾಡಿಗ ಚಿನ್ನ ಗೆದ್ದರು. ಬೆಂಗಳೂರಿನ ಜ್ಯೋತಿಕಾ ಮಹಿಳೆಯರ ವಿಭಾಗದ 200 ಮೀಟರ್ಸ್‌ನಲ್ಲಿ ಮೊದಲಿಗರಾದರು. ಯೂತ್ ವಿಭಾಗದ 200 ಮೀಟರ್ಸ್‌ನಲ್ಲಿ ದಕ್ಷಿಣ ಕನ್ನಡದ ಹಶ್ಮಿತ್ ಸಾಲಿಯಾನ್ ಮತ್ತು ರೀತುಶ್ರೀ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು.

ಮೊದಲ ದಿನದ ಫಲಿತಾಂಶಗಳು: ಪುರುಷರ 100 ಮೀ ಓಟ: ಅಭಿನ್ ದೇವಾಡಿಗ (ಉಡುಪಿ)–1. ಕಾಲ: 21.23 ಸೆ, ವಿನಾಯಕ ಸೊಟ್ಟಣ್ಣವರ (ಬೆಂಗಳೂರು)–2, ಧನುಷ್ ಕುಡ್ತಡ್ಕರ್‌ (ಉಡುಪಿ)–3; 800 ಮೀ: ತುಷಾರ್ ವಾಸನ್‌ (ಬೆಂಗಳೂರು)–1. ಕಾಲ: 1ನಿ, 51.1 ಸೆ, ಕಮಲಾಕಣ್ಣನ್‌ ಸುಂದರವದನ್‌ (ಬೆಂಗಳೂರು)–2, ಬೋಪಣ್ಣ ಕೆ.ಟಿ (ಮೈಸೂರು)–3; 5000 ಮೀ: ಶಿವಾಜಿ ಪಿ (ಉತ್ತರ ಕನ್ನಡ)–1.ಕಾಲ: 14ನಿ 41.6 ಸೆ, ವೈಭವ್ ಮಾರುತಿ ಪಾಟೀಲ (ಬೆಳಗಾವಿ)–2, ಎ.ಆರ್.ರೋಹಿತ್‌ (ಬೆಳಗಾವಿ)–3; 110 ಮೀ ಹರ್ಡಲ್ಸ್‌: ಸುಶಾಂತ್ ಎಂ.ಡಿ (ಉಡುಪಿ)–1.ಕಾಲ: 15 ಸೆ, ಹರ್ಷ ಎಸ್‌.ಎನ್‌ (ತುಮಕೂರು)–2; ಹೈಜಂಪ್‌: ಸುದೀಪ್ (ಶಿವಮೊಗ್ಗ)–1. ಎತ್ತರ: 1.80 ಮೀ, ಅನಿಲ್ ಕುಮಾರ್ (ದಕ್ಷಿಣ ಕನ್ನಡ)–2; ಲಾಂಗ್ ಜಂಪ್‌: ಸಿದ್ಧಾರ್ಥ ಮೋಹನ್ ನಾಯಕ್‌ (ಬೆಂಗಳೂರು)–1. ಅಂತರ: 7.28ಮೀ, ಸುಶಾನ್ ಸುವರ್ಣ (ಬೆಂಗಳೂರು)–2, ಪೃಥ್ವಿ ಎಸ್‌ (ಬೆಂಗಳೂರು)–3; ಶಾಟ್‌ಪಟ್‌: ಮೊಹಮ್ಮದ್ ಸಕ್ಲೈನ್ ಅಹಮ್ಮದ್ (ಮೈಸೂರು)–1. ದೂರ: 16.10 ಮೀ, ಪ್ರಜ್ವಲ್ ಶೆಟ್ಟಿ (ಉಡುಪಿ)–2, ಮೋಹಿತ್ ರಾಜ್ (ಮೈಸೂರು)–3; ಹ್ಯಾಮರ್ ಥ್ರೋ: ಧೀರಜ್ ಪೂಜಾರಿ (ಬೆಂಗಳೂರು)–1. ದೂರ: 54.90 ಮೀ, ಯಮನೂರಪ್ಪ–2, ಕರೀಂಸಾಬ್ ಪೈಲ್ವಾನ್–3.

ಮಹಿಳೆಯರು: 200 ಮೀ: ಜ್ಯೋತಿಕಾ (ಬೆಂಗಳೂರು)–1. ಕಾಲ: 24.26 ಸೆ, ಸುಧೀಕ್ಷಾ (ಬೆಂಗಳೂರು)–2, ಸಿಮಿ (ಉತ್ತರ ಕನ್ನಡ)–3; 800 ಮೀ: ವಿಜಯಕುಮಾರಿ ಜಿ.ಕೆ (ಬೆಂಗಳೂರು)–1.ಕಾಲ: 2ನಿ 11.2 ಸೆ, ಅರ್ಪಿತಾ ಇ.ಬಿ (ಶಿವಮೊಗ್ಗ)–2, ವೈಷ್ಣವಿ ರಾವಲ್‌ (ಉತ್ತರ ಕನ್ನಡ)–3; 5000 ಮೀ: ಕೆ.ಎಂ.ಲಕ್ಷ್ಮಿ (ದಕ್ಷಿಣ ಕನ್ನಡ)–1. ಕಾಲ: 17ನಿ 43.9ಸೆ, ಆರಾಧನಾ (ಬೆಂಗಳೂರು)–2, ಎಚ್‌.ಎಂ.ಹರ್ಷಿತಾ (ಮೈಸೂರು)–3;100 ಮೀ ಹರ್ಡಲ್ಸ್‌: ಅಂಜಲಿ ಸಿ (ದಕ್ಷಿಣ ಕನ್ನಡ)–1, ಮೇಧಾ ರಾಜೇಶ್ ಕಾಮತ್‌ (ಬೆಂಗಳೂರು)–2, ಪ್ರತೀಕಾ (ಉಡುಪಿ)–3; ಲಾಂಗ್‌ಜಂಪ್‌: ಶ್ರೀದೇವಿಕಾ ವಿ.ಎಸ್‌ (ದಕ್ಷಿಣ ಕನ್ನಡ)–1. ಅಂತರ: 5.73 ಮೀ, ದಿಶಾ ಗಣಪತಿ (ಮೈಸೂರು)–2, ಐಶ್ವರ್ಯಾ ಪಾಟೀಲ (ದಕ್ಷಿಣ ಕನ್ನಡ)–3; ಜಾವೆಲಿನ್ ಥ್ರೋ: ರಮ್ಯಶ್ರೀ ಜೈನ್‌ (ದಕ್ಷಿಣ ಕನ್ನಡ)–1. ದೂರ: 51.77ಮೀ, ಕರೀಷ್ಮಾ ಸನಿಲ್ (ಉಡುಪಿ)–2, ಶ್ರಾವ್ಯಾ (ಉಡುಪಿ)–3; ಶಾಟ್‌ಪಟ್‌: ಅಂಬಿಕಾ (ಮೈಸೂರು)–1, 14.70 ಮೀ, ಪದ್ಮಿನಿ ಗಣಪತಿ (ಬೆಂಗಳೂರು)–2, ಬೃಂದಾ ಗೌಡ (ಮೈಸೂರು)–3; ಹ್ಯಾಮರ್ ಥ್ರೋ: ಅಮ್ರೀನ್ (ದಕ್ಷಿಣ ಕನ್ನಡ)–1. ದೂರ: 44.90 ಮೀ, ಸ್ಪೃಹಾ ನಾಯಕ್‌ (ಬೆಳಗಾವಿ)–2, ವರ್ಷಾ (ದಕ್ಷಿಣ ಕನ್ನಡ)–3.

ಯೂತ್ ಬಾಲಕರು: 200 ಮೀ: ಹಶ್ಮಿತ್ ಸಾಲಿಯಾನ್‌ (ದಕ್ಷಿಣ ಕನ್ನಡ)–1. ಕಾಲ: 22.08 ಸೆ, ಹಿಮೇಶ್ ಎನ್‌ (ಬೆಂಗಳೂರು)–2, ಸೈಯಸ್ ಸಬೀರ್‌ (ಬೆಂಗಳೂರು)–3; 1000 ಮೀ: ಭೂಷಣ್ ಗುರವ್‌ (ಬೆಳಗಾವಿ)–1. ಕಾಲ: 2ನಿ 31.1ಸೆ, ಪ್ರಥಮ್ ಎಚ್‌.ಎಸ್‌ (ಚಿಕ್ಕಮಗಳೂರು)–2, ತೇಜಸ್ ಡಿ.ಎಸ್ (ಶಿವಮೊಗ್ಗ)–3; 110 ಮೀ ಹರ್ಡಲ್ಸ್‌: ತೇಜಲ್ ಕೆ.ಆರ್‌ (ದಕ್ಷಿಣ ಕನ್ನಡ)–1. ಕಾಲ: 14.9 ಸೆ, ಚಂದನ್ ಎಸ್‌ (ಬೆಂಗಳೂರು)–2, ಭುವನ್ ಎಸ್‌.ಎಸ್‌ (ತುಮಕೂರು)–3; ಹೈಜಂಪ್‌: ಸಿನಾನ್ (ಉಡುಪಿ)–1. ಎತ್ತರ: 1.90 ಮೀ, ಕೆ.ಆರ್.ಯಶ್ವಿನ್ (ದಕ್ಷಿಣ ಕನ್ನಡ)–2, ರೋಹಿತ್ ಕುಮಾರ್ (ಶಿವಮೊಗ್ಗ)–3; ಲಾಂಗ್‌ಜಂಪ್‌: ನೋಯೆಲ್ ಆರ್‌.‍ಪಿ (ದಕ್ಷಿಣ ಕನ್ನಡ)–1. ಅಂತರ: 6.52ಮೀ, ರೀಹನ್ ಕುಮಾರ್‌ (ದಕ್ಷಿಣ ಕನ್ನಡ)–2, ಪ್ರಣವ್ ಮಮೋಜ್‌ (ಬೆಂಗಳೂರು)–3; ಶಾಟ್‌ಪಟ್‌: ಅನುರಾಗ್ ಜಿ (ಉಡುಪಿ)–1. ದೂರ: 15.36ಮೀ, ಸುಹಾಸ್ ಎಚ್‌.ಎಸ್‌ (ಚಾಮರಾಜನಗರ)–2, ಶೋಭಿತ್ ದೇವಾಡಿಗ (ದಕ್ಷಿಣ ಕನ್ನಡ)–3; ಜಾವೆಲಿನ್ ಥ್ರೋ: ಪುಷ್ಪಕ್ ನೆಲ್ವಡೆ (ಬೀದರ್‌)–1. ದೂರ: 58.03 ಮೀ, ಶುಭಂ ಎಸ್‌.ಕೆ (ಬೆಳಗಾವಿ)–2, ಕುಲದೀಪ್ ಕುಮಾರ್ (ಉತ್ತರ ಕನ್ನಡ)–3.

ಯೂತ್ ಬಾಲಕಿಯರು: ರೀತುಶ್ರೀ (ದಕ್ಷಿಣ ಕನ್ನಡ)–1. ಕಾಲ: 25.73 ಸೆ, ಅಭಿಜ್ಞಾ ಪಿ (ಶಿವಮೊಗ್ಗ)–2, ಅನುಷಾ ನಾಯಕ್ (ಶಿವಮೊಗ್ಗ)–3; 1000ಮೀ: ಪ್ರಣತಿ (ಬೆಂಗಳೂರು)–1. ಕಾಲ: 2ನಿ 57ಸೆ, ಶಿಲ್ಪಾ ಹೊಸಮನಿ (ಧಾರವಾಡ)–2, ಸೀಮಾ ನಂದ್ಯಾಳ್ಕರ್‌ (ಬೆಳಗಾವಿ)–3; 100 ಮೀ ಹರ್ಡಲ್ಸ್‌: ಇದಾ ಎಲಿಜಬೆತ್‌ (ಬೆಂಗಳೂರು)–1. ಕಾಲ:14.6 ಸೆ, ಅಪೂರ್ವಾ ಆನಂದ್ ನಾಯಕ್‌ (ಬೆಳಗಾವಿ)–2, ಗೌರಾಂಗಿ (ಶಿವಮೊಗ್ಗ)–3; ಹೈಜಂಪ್‌: ಗೌತಮಿ (ಶವಮೊಗ್ಗ)–1. ದೂರ: 1.67ಮೀ, ನೈಮಿಷ ಪೂಜಾರಿ (ಉಡುಪಿ)–2, ಹಿಮಾನಿ ಎಸ್‌ (ಚಾಮರಾಜನಗರ)–3; ಲಾಂಗ್ ಜಂಪ್‌: ನಿತ್ಯಶ್ರೀ ವಿ (ದಕ್ಷಿಣ ಕನ್ನಡ)–1. ಅಂತರ: 5.13ಮೀ, ಸಿರಿ ಎನ್‌ (ಚಿಕ್ಕಬಳ್ಳಾಪುರ)–2, ಮೈತ್ರೇಯಿ ಕೆ (ಉಡುಪಿ)–3; ಶಾಟ್‌ಪಟ್‌: ಸಂಜನಾ ರೆಡ್ಡಿ (ಮೈಸೂರು)–1. ದೂರ: 13.5ಮೀ, ವ್ರತಾ ಹೆಗಡೆ (ದಕ್ಷಿಣ ಕನ್ನಡ)–2, ವಿಸ್ಮಿತಾ (ದಕ್ಷಿಣ ಕನ್ನಡ)–3.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT