ನವದೆಹಲಿ : ಕೇಂದ್ರದ ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾರತ ಬಾಕ್ಸಿಂಗ್ ಫೆಡರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೊಮ್ಮೆ ಅನರ್ಹರಾಗಿದ್ದಾರೆ.

ಇದೇ ತಿಂಗಳ 21ರಂದು ನಡೆಯಲಿರುವ ಚುನಾವಣೆಗೆ ಮತದಾರರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು ಠಾಕೂರ್ ಹೆಸರನ್ನು ಕೈಬಿಡಲಾಗಿದೆ. ಬಿಎಫ್ಐ ವಾರ್ಷಿಕ ಮಹಾಸಭೆಗೆ (ಎಜಿಎಂ) ಹಿಮಾಚಲ ಪ್ರದೇಶ ಬಾಕ್ಸಿಂಗ್ ಸಂಸ್ಥೆಯು ತನ್ನ ಅಧ್ಯಕ್ಷ ರಾಜೇಶ್ ಭಂಡಾರಿ ಮತ್ತು ಠಾಕೂರ್ ಅವರನ್ನು ತನ್ನ ಇಬ್ಬರು ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಿತ್ತು. ಈ ಸಭೆಯ ಮುಖ್ಯ ಕಾರ್ಯಸೂಚಿ 2025–2029ರ ಅವಧಿಗೆ ಪದಾಧಿಕಾರಿಗಳ ಆಯ್ಕೆ ಮಾಡುವುದಾಗಿದೆ.

ಆದರೆ ಬಾಕ್ಸಿಂಗ್ ಫೆಡರೇಷನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ವರ್ಲ್ಡ್ ಬಾಕ್ಸಿಂಗ್ ರಚಿಸಿರುವ ಹಂಗಾಮಿ ಸಮಿತಿಯು 66 ಮಂದಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಠಾಕೂರ್ ಹೆಸರು ಇಲ್ಲ.

ಠಾಕೂರ್ ಅವರ ನಾಮನಿರ್ದೇಶನವು ಬಿಎಫ್ಐ ನಿಯಮಾವಳಿಯ ಪ್ರಕಾರ ಇಲ್ಲ ಎಂದು ಹಂಗಾಮಿ ಸಮಿತಿ ತಿಳಿಸಿದೆ. ವಾರ್ಷಿಕ ಮಹಾಸಭೆಗೆ ನಾಮನಿರ್ದೇಶನಗೊಂಡವರು ಆಯಾ ರಾಜ್ಯ ಸಂಸ್ಥೆಗಳಲ್ಲಿ ಸಭೆಯಲ್ಲಿ ಆಯ್ಕೆಗೊಂಡವರಾಗಿರಬೇಕು ಎಂದು ಬಿಎಫ್ಐ ನಿಯಮಾವಳಿ 20ನೇ ಕಲಮು ಸ್ಪಷ್ಟಪಡಿಸುತ್ತದೆ ಎಂದು ಹಂಗಾಮಿ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.