ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಅಶ್ವಿನಿ– ತನೀಶಾ ಜೋಡಿ ರನ್ನರ್‌ ಅಪ್‌

Published 3 ಡಿಸೆಂಬರ್ 2023, 16:32 IST
Last Updated 3 ಡಿಸೆಂಬರ್ 2023, 16:32 IST
ಅಕ್ಷರ ಗಾತ್ರ

ಲಖನೌ: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನೀಶಾ ಕ್ರಾಸ್ಟೊ ಅವರು ಭಾನುವಾರ ಇಲ್ಲಿ ನಡೆದ ಸಯ್ಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಫೈನಲ್‌ ಪಂದ್ಯದಲ್ಲಿ ಪರಾಭವಗೊಂಡು, ರನ್ನರ್‌ ಅಪ್‌ ಸ್ಥಾನ ‍ಪಡೆದರು.

ವಿಶ್ವ 32ನೇ ಕ್ರಮಾಂಕದ ಭಾರತದ ಜೋಡಿಯು 14–21, 21–17, 15–21ರಿಂದ ಮೂರನೇ ಶ್ರೇಯಾಂಕದ ಜಪಾನ್‌ನ ರಿನ್ ಇವಾನಾಗ ಮತ್ತು ಕೀ ನಕಾನಿಶಿ ಅವರಿಗೆ ಮಣಿದರು. 7ನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ್ತಿಯರು 77 ನಿಮಿಷದಲ್ಲಿ ಸೋಲುಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT