ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಜಿಗಿದ ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಬೈ ಲೋಕಲ್ ರೈಲ್ನಿಂದ ಜಿಗಿದಿದ್ದ ಕರಿಷ್ಮಾ ಅವರ ತಲೆ, ಕೈಗಳಿಗೆ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ‘ಚಿತ್ರೀಕರಣಕ್ಕೆ ತೆರಳುವ ವೇಳೆ ಸೀರೆಯುಟ್ಟು ಲೋಕಲ್ ರೈಲು ಹತ್ತಿದ್ದೆ. ತಕ್ಷಣ ರೈಲು ಚಲಿಸರಾಂಭಿಸಿತು. ಆದರೆ, ನನ್ನ ಸ್ನೇಹಿತರು ರೈಲು ಹತ್ತಿರಲಿಲ್ಲ, ಹೀಗಾಗಿ ರೈಲಿನಿಂದ ಹೊರಕ್ಕೆ ಜಿಗಿದೆ. ದುರದೃಷ್ಟವಶಾತ್ ನನ್ನ ಬೆನ್ನು, ತಲೆಗೆ ಗಾಯಗಳಾಗಿವೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಕರಿಷ್ಮಾ ಅವರು, ಸೂಪರ್ 30, ಪ್ಯಾರ್ ಕಾ ಪಂಚನಾಮ್ 2, ನಜರ್ ಅಂದಾಜ್, ರಾಗಿಣಿ ಎಂಎಂಎಸ್ ರಿಟರ್ನ್ (ವೆಬ್ ಸಿರೀಸ್) ಸೇರಿಂದತೆ ಹಲವು ಸಿನಿಮಾ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.