ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸೈಕ್ಲಿಸ್ಟ್‌ಗಳಿಗೆ ಚಿನ್ನ, ಎರಡು ಬೆಳ್ಳಿ

ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್
Published 21 ಫೆಬ್ರುವರಿ 2024, 16:38 IST
Last Updated 21 ಫೆಬ್ರುವರಿ 2024, 16:38 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸೈಕ್ಲಿಸ್ಟ್‌ಗಳು, ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ಸ್‌ನಲ್ಲಿ ಉತ್ತಮ ಆರಂಭ ಮಾಡಿದರು. ಬುಧವಾರ ಮಹಿಳೆಯರ ಜೂನಿಯರ್ ತಂಡ ಸ್ಪ್ರಿಂಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತು. ಇದರ ಜೊತೆಗೆ ಭಾರತ ತಂಡ ಎರಡು ಬೆಳ್ಳಿ, ಒಂದು ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿತು.

ಸರಿತಾ ಕುಮಾರಿ, ನಿಯಾ ಸೆಬಾಸ್ಟಿಯನ್ ಮತ್ತು ಜೈನಾ ಮೊಹಮ್ಮದ್ ಅಲಿ ಪಿರ್ಖಾನ್ ಅವರನ್ನು ಒಳಗೊಂಡ ಭಾರತ ತಂಡ ಕೌಶಲ ಮತ್ತು ಸಾಂಘಿಕ ಪ್ರದರ್ಶನ ನೀಡಿ 54.383 ಸೆ.ಗಳಲ್ಲಿ ಗುರಿತಲುಪಿ, ಕೊರಿಯಾ ತಂಡವನ್ನು ಎರಡನೇ ಸ್ಥಾನಕ್ಕೆ ಸರಿಸಿತು.

‘ಏಷ್ಯಾದ ಬಲಾಢ್ಯ ತಂಡವನ್ನು ಸೋಲಿಸಿರುವುದು ನಮಗೆ ಕನಸಿನಂತೆ ಕಾಣುತ್ತಿದೆ. ತಂಡದ ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ’ ಎಂದು ಸ್ಪರ್ಧೆಯ ನಂತರ ನಿಯಾ ಪ್ರತಿಕ್ರಿಯಿಸಿದರು.

ಪ್ಯಾರಾ ಟೀಮ್ ಸ್ಪ್ರಿಂಟ್ ವಿಭಾಗದಲ್ಲಿ ಭಾರತ ತಂಡ (ಅರ್ಷದ್ ಶೇಕ್, ಜಲಾಲುದ್ದೀನ್ ಅನ್ಸಾರಿ ಮತ್ತು ಬಸವರಾಜ ಹೊರಡ್ಡಿ) 1ನಿ.02.661 ಸೆ.ಗಳ ಅವಧಿಯೊಡನೆ ರಜತ ಪದಕ ಪಡೆಯಿತು. ಮಲೇಷ್ಯಾ (52.284 ಸೆ.) ಚಿನ್ನ ಗೆದ್ದರೆ, ಸೌದಿ ಅರೇಬಿಯಾ ಕಂಚಿನ ಪದಕ ಗಳಿಸಿತು.

ಜೂನಿಯರ್ ಟೀಮ್‌ ಸ್ಪ್ರಿಂಟ್‌ ರೇಸ್‌ನಲ್ಲಿ ಭಾರತ ಇನ್ನೊಂದು ಬೆಳ್ಳಿ ಪಡೆಯಿತು. ನಾರಾಯಣ ಮಹತೊ, ಸೈಯ್ಯದ್ ಖಾಲಿದ್ ಬಾಘಿ ಮತ್ತು ಮಯಂಗ್‌ಲಂಬಾಂ ವಟ್ಟಬಾ ಮೀಥಿ ಅವರಿದ್ದ ತಂಡ 47.93 ಸೆ. ತೆಗೆದುಕೊಂಡಿತು. ಕೊರಿಯಾದ ಸ್ಪರ್ಧಿಗಳನ್ನು ಹಿಂದೆಹಾಕಿದರು.

ಮಹಿಳಾ ಜೂನಿಯರ್ ತಂಡ (ಹರ್ಷಿತಾ ಜಾಖಡ್‌, ಸುಹಾಣಿ ಕುಮಾರಿ, ಧನ್ಯದಾ ಜೆ.ಪಿ. ಮತ್ತು ಭೂಮಿಕಾ) ತೀವ್ರ ಹೋರಾಟ ಕಂಡ ಟೀಮ್ ಪರ್ಸ್ಯೂಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯಿತು. ದಕ್ಷಿಣ ಕೊರಿಯಾ ಚಿನ್ನ ಗೆದ್ದರೆ, ಕಜಕಸ್ತಾನ ಬೆಳ್ಳಿಯ ಪದಕ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT