ಬೆಂಗಳೂರು: ಸಮರ್ಥ್ ಹಾಗೂ ದೇವ್ ರಾಘವೇಂದ್ರ ಅವರ ಆಟದ ಬಲದಿಂದ ಹೂಪ್ಸ್ 7 ಬಿ.ಸಿ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 67–65ರಿಂದ ಎಂಎನ್ಕೆ ರಾವ್ ಪಾರ್ಕ್ ಬಿ.ಸಿ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಬುಧವಾರ ನಡೆದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಹೂಪ್ಸ್ 7 ಬಿ.ಸಿ ತಂಡದ ಪರ ಸಮರ್ಥ್ ಹಾಗೂ ದೇವ್ ತಲಾ 21 ಅಂಕ ಗಳಿಸಿದರು. ಎಂಎನ್ಕೆ ರಾವ್ ಪಾರ್ಕ್ ಬಿ.ಸಿ ತಂಡದ ಪರ ಆಕಾಶ್ 22 ಅಂಕ ಕಲೆಹಾಕಿದರು.

ವಿರಾಮದ ವೇಳೆಗೆ 12 ಅಂಕಗಳ (35–23) ಮುನ್ನಡೆಯಲ್ಲಿದ್ದ ಹೂಪ್ಸ್ 7 ಬಿ.ಸಿ ತಂಡಕ್ಕೆ ಉತ್ತರಾರ್ಧದಲ್ಲಿ ಎಂಎನ್ಕೆ ತಂಡ ಪ್ರಬಲ ಪೈಪೋಟಿ ನೀಡಿತು. ಅಂತಿಮವಾಗಿ ಹೂಪ್ಸ್ ಎರಡು ಅಂಕಗಳಿಂದ ಗೆಲುವು ಸಾಧಿಸಿತು.

ಫಲಿತಾಂಶ: ರೌಂಡ್ ರಾಬಿನ್ ಲೀಗ್: ಬಾಲಕರು: ಚಿಕ್ಕಮಗಳೂರು ಜಿಲ್ಲಾ ತಂಡ 76–59ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಡಿವೈಇಎಸ್ ಬೆಂಗಳೂರು ತಂಡ 85–56ರಿಂದ ಎಚ್ಬಿಆರ್ ಬಿ.ಸಿ ವಿರುದ್ಧ; ಹೂಪ್ಸ್ 7 ಬಿ.ಸಿ ತಂಡ 67–65ರಿಂದ ಎಂಎನ್ಕೆ ರಾವ್ ಪಾರ್ಕ್ ಬಿ.ಸಿ ತಂಡದ ವಿರುದ್ಧ ಗೆಲುವು ಸಾಧಿಸಿದವು.

ಬಾಲಕಿಯರು: ಮಂಡ್ಯ ಜಿಲ್ಲಾ ತಂಡವು 73–50ರಿಂದ ವಿವೇಕ್ಸ್ ಬಿ.ಸಿ ತಂಡದ ಎದುರು ಜಯ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.