ಬೆಂಗಳೂರು: ಗೌತಮ್ , ದೇವ್ ಮತ್ತು ಅನಿರುದ್ಧ ಅವರ ಅಮೋಘ ಆಟದ ಬಲದಿಂದ ನಗರದ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ರಾಜ್ಯಮಟ್ಟದ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದಿತು.

ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಟೂರ್ನಿಯ ಫೈನಲ್ನಲ್ಲಿ ರಾಮಯ್ಯ ಸಂಸ್ಥೆಯ ತಂಡ ಕ್ರೈಸ್ಟ್ ವಿವಿ ತಂಡವನ್ನು 50–46ರಿಂದ ಮಣಿಸಿತು.

ರೋಚಕ ಹಣಾಹಣಿಗೆ ಸಾಕ್ಷಿಯಾದ ಪಂದ್ಯದಲ್ಲಿ ಗೌತಮ್ ರೆಡ್ಡಿ 12, ದೇವ್ ಮತ್ತು ಅನಿರುದ್ಧ ತಲಾ 10 ಪಾಯಿಂಟ್ಸ್ ಕಲೆ ಹಾಕಿ ರಾಮಯ್ಯ ಸಂಸ್ಥೆಯ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ರೈಸ್ಟ್ ವಿವಿ ತಂಡಕ್ಕಾಗಿ ಯಶವಂತ್ 21 ಮತ್ತು ರಜತ್ ಎಂಟು ಪಾಯಿಂಟ್ ಗಳಿಸಿಕೊಟ್ಟರು.

ಸೆಮಿಫೈನಲ್ನಲ್ಲಿ ರಾಮಯ್ಯ ಸಂಸ್ಥೆ 67–51ರಿಂದ ಎಸ್ಜೆಸಿಸಿಯನ್ನು ಮಣಿಸಿತು. ರಾಮಯ್ಯ ಪರ ಅಶುತೋಷ್ ಸಾಹು 14 ಮತ್ತು ತೌತಮ್ 10 ಪಾಯಿಂಟ್ಸ್ ಗಳಿಸಿದರು. ಎಸ್ಜೆಸಿಸಿ ಪರ ಅವ್ಯುತ್ ಕೃಷ್ಣ 12 ಮತ್ತು ರಾಹುಲ್ 10 ಪಾಯಿಂಟ್ಸ್ ಕಲೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.