ಬೆಂಗಳೂರು: ಶಶಿಧರ್ ಮತ್ತು ಸಂಕೇತ್ ಅವರ ಆಟದ ಬಲದಿಂದ ಎಚ್‌ಬಿಆರ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು ಎಸ್. ರಂಗರಾಜನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಪುರುಷರ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ‘ಸಿ’ ಡಿವಿಷನ್ ಲೀಗ್ ಪಂದ್ಯದಲ್ಲಿ 58–55ರಿಂದ ಬಿಸಿವೈಎ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ, ಪ್ರಥಮಾರ್ಧದದಲ್ಲಿ ಹತ್ತು ಅಂಕಗಳಿಂದ (19–29) ಹಿನ್ನಡೆಯಲ್ಲಿದ್ದ ಎಚ್‌ಬಿಆರ್ ಬಿ.ಸಿ ತಂಡವು ನಂತರದಲ್ಲಿ ಪಾರಮ್ಯ ಮೆರೆಯಿತು. ಶಶಿಧರ್ 23 ಹಾಗೂ ಸಂಕೇತ್ 18 ಅಂಕ ಗಳಿಸಿದರು. ಬಿಸಿವೈಎ ತಂಡದ ಅಫ್ರೈಡ್ 18 ಹಾಗೂ ಅರುಣ್ 16 ಅಂಕ ಕಲೆಹಾಕಿದರು.
ಫಲಿತಾಂಶಗಳು: ಅಪ್ಪಯ್ಯ ಬಿ.ಸಿ 62–32ರಿಂದ ಪಟ್ಟಾಭಿರಾಮ್ ಬಿ.ಸಿ ವಿರುದ್ಧ; ಸಿಜೆಸಿ 55–36ರಿಂದ ಎಸ್‌ಬಿಐ ವಿರುದ್ಧ; ಎಚ್‌ಬಿಆರ್ ಬಿ.ಸಿ 58–55ರಿಂದ ಬಿಸಿವೈಎ ವಿರುದ್ಧ; ಯಲಹಂಕ ನ್ಯೂ ಟೌನ್ ಬಿ.ಸಿ 76–58ರಿಂದ ಹಲಸೂರು ಎಸ್.ಸಿ ವಿರುದ್ಧ; ರಾಜ್‌ಕುಮಾರ್ ಬಿ.ಸಿ 69–57ರಿಂದ ಎಂಸಿಎಚ್‌ಎಸ್ ವಿರುದ್ಧ; ಸಹಕಾರನಗರ್ ಬಿ.ಸಿ 65–45ರಿಂದ ಹೆಬ್ಬಾಳ ಬಿ.ಸಿ ವಿರುದ್ಧ ಹಾಗೂ ಎಂಇಜಿ & ಸೆಂಟರ್ ತಂಡವು 79–56ರಿಂದ ಹೂಪ್ಸ್ 7 ಬಿ.ಸಿ ವಿರುದ್ಧ ಜಯ ಗಳಿಸಿದವು.
Highlights - State C division league championship Men for S Rangarajan memorial trophy. Results of the matches played at Kanteerava courts on 22-6-2025. League matches:1. HBR BC 58( Shashidhar 23, Sanketh 18) bt BCYA 55( Afride 18, Arun 16) Ht 19-29.2. CJC 55( Vinod 14, Mahesh 11) bt SBI 36( Sridhar 16, Patil 10) Ht 29-15.3. Appaiah bc 62( Deekshith 12, Tejas 10) bt Pattabhiram bc 32( Arham 14) Ht 30-17.4. Yelahanka New Town bc 76( Cheguevara 31, Shivu 20) bt Halasur sc 58( Kushal 13, Roopesh 11) Ht 40-31.5. Rajkumar bc 69( Danish 18, Devi prasad 17) bt MCHS 57( Ajay 19, Shubam 9) Ht 39-27.6. Sahakarnagar bc 65( Rocky 33, Sohan 16) bt Hebbal bc 45( Chetan 10, Vishal 8) Ht 47-19.7. MEG & Centre 79( Juval john 20, Dharani 13) bt Hoops 7bc 56( Pranesh 21, Aarav 14) Ht 40-15.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.