ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು..
Published 14 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒತ್ತಡ ತರುವಂಥ ಕೆಲಸಗಳಿಂದ ದೂರವಿರುವ ಪ್ರಯತ್ನ ಮಾಡಿ. ಸ್ಪರ್ಧೆಯಲ್ಲಿ ಜಯ ಗಳಿಸುವಿರಿ. ಪ್ರಾಮಾಣಿಕವಾಗಿ ಸಂಪಾದನೆ ಮಾಡುತ್ತಿರುವ ನಿಮಗೆ ಶತ್ರುಗಳ ಭಯ ಬೇಡವೆ ಬೇಡ. ರಾತ್ರಿ ವೇಳೆಯ ಪ್ರಯಾಣ  ತಡೆಗಟ್ಟಿರಿ.
ವೃಷಭ
ಕಾರ್ಯದ ನಿಮಿತ್ತ ಕುಟುಂಬದ ಸದಸ್ಯರನ್ನು ಎದುರು ಹಾಕಿಕೊಳ್ಳಬೇಕಾದ ಪರಿಸ್ಥಿತಿಗಳು ಬರಬಹುದು.  ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ. ಕಲಹಗಳಲ್ಲಿ ಮೌನವಾಗಿರಿ.
ಮಿಥುನ
ಮನೆಯ ಕಾರ್ಮಿಕರು ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣುವುದು ಸೂಕ್ತಕರವಾದುದು. ನೀವಾಡುವ ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಮಾತನಾಡಿ.
ಕರ್ಕಾಟಕ
ಪೊಲೀಸ್ ವಿಭಾಗದಲ್ಲಿದ್ದು, ಮಾಹಿತಿ ಕಲೆ ಹಾಕುವಲ್ಲಿ  ವಹಿಸುವ ಮುಂಜಾಗ್ರತಾ ಕ್ರಮ ಸಾಕಾಗದು.  ಕೆಲಸದ ಗುಣಮಟ್ಟ ಕಡಿಮೆ ಆಗುತ್ತಿರುವುದಕ್ಕೆ ಕಾರಣ ನಿರಾಸಕ್ತಿಯೇ ಆಗಿರುತ್ತದೆ.
ಸಿಂಹ
ಜೀವನದಲ್ಲಿ ನಡೆದ ಹಲವಾರು ಹಾಸ್ಯ ಪ್ರಸಂಗಗಳನ್ನು  ಸ್ನೇಹಿತರೊಂದಿಗೆ ನೆನೆಯುವಿರಿ. ನೂತನ ವಾಹನ ಖರೀದಿಸುವ ಯೋಚನೆಯನ್ನು ಮುಂದೂಡಿ. ಲೇವಾದೇವಿ ನಡೆಸುವವರು ಲಾಭ ಹೊಂದುವಿರಿ.
ಕನ್ಯಾ
ಚಲನಚಿತ್ರಗಳಲ್ಲಿ ಬರುವ ಸನ್ನಿವೇಶಗಳನ್ನು  ನಿಜ ಜೀವನದಲ್ಲಿ ಕಲ್ಪಿಸಿಕೊಳ್ಳಬೇಡಿ. ಯಂತ್ರಗಳ ಕೆಲಸವನ್ನು ಮಾಡುವಾಗ ಅತ್ಯಂತ ಜಾಗರೂಕತೆ ವಹಿಸಿ ನಿರ್ವಹಣೆ ಮಾಡುವುದು ಸೂಕ್ತ.
ತುಲಾ
ವಾದ-ವಿವಾದಗಳನ್ನು ಮಾಡಿ ಸಮಯ ಹಾಳು ಮಾಡುವ ಬದಲು ಸಮಾಧಾನದಿಂದ ಕೆಲಸ ಮಾಡಿದಲ್ಲಿ ನಿಧಾನವಾದರೂ ಜಯ ನಿಮ್ಮ ದಾಗುವುದು. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಯತ್ನಿಸುವಿರಿ.
ವೃಶ್ಚಿಕ
ವ್ಯಾವಹಾರಿಕ ವಿಷಯದಲ್ಲಿ ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು  ತಿಳಿಯುವುದು. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ.
ಧನು
ಜನರನ್ನು ಬಳಸುವ ಸಲುವಾಗಿ ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು. ಶೈಕ್ಷಣಿಕ ಸಂಸ್ಥೆಗಳಲ್ಲಿನ  ಬೌದ್ಧಿಕ ಅನಾವರಣಕ್ಕೆ ಹಾದಿ ಸಿಗಲಿದೆ.
ಮಕರ
ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ  ಹಲವಾರು ಕುಟುಂಬದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ, ದೇವರ ದರ್ಶನದಂಥಕಾರ್ಯಗಳು ನಡೆಯುತ್ತವೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯ.
ಕುಂಭ
ಸಾಮಾನ್ಯ ಪ್ರಜೆ ನೀವಾಗಿದ್ದಲ್ಲಿ ರಾಜಕೀಯ ತಿಕ್ಕಾಟಗಳಲ್ಲಿ ಭಾಗವಹಿಸಿ ಅಪರಾಧಿ ಸ್ಥಾನಕ್ಕೆ ತಲುಪದೆ ಇರುವುದು ಸೂಕ್ತಕರ. ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು. ವಸ್ತ್ರ ವ್ಯಾಪಾರದಲ್ಲಿ ಹಿನ್ನಡೆ.
ಮೀನ
ಭಾವನೆಗಳಿಗೆ ಬೆಲೆ ಕೊಡದವರ ಎದುರು ನಿಮ್ಮ ದುಃಖಗಳನ್ನು ಹೇಳಿಕೊಳ್ಳುವುದರಿಂದ ಪ್ರಯೊಜನವಿರುವುದಿಲ್ಲ. ಪೂರ್ಣ ಮನಸ್ಸಿನಿಂದ ಮಾಡಿದಂಥ ಕಾರ್ಯಗಳು ಉತ್ತಮ ಫಲ ನೀಡುತ್ತವೆ.
ADVERTISEMENT
ADVERTISEMENT