ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್ ವಾರಿಯರ್ಸ್‌ಗೆ ತಿವಿಯದ ಬೆಂಗಳೂರು ಬುಲ್ಸ್‌

Published : 9 ನವೆಂಬರ್ 2024, 20:27 IST
Last Updated : 9 ನವೆಂಬರ್ 2024, 20:27 IST
ಫಾಲೋ ಮಾಡಿ
0
ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್ ವಾರಿಯರ್ಸ್‌ಗೆ ತಿವಿಯದ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ ಲೀಗ್‌

ಹೈದರಾಬಾದ್: ಬೆಂಗಾಲ್ ವಾರಿಯರ್ಸ್ ತಂಡ, ಪ್ರೊ ಕಬಡ್ಡಿ ಲೀಗ್‌ನ ಹೈದರಾಬಾದ್ ಚರಣದ ಅಂತಿಮ ಪಂದ್ಯದಲ್ಲಿ 40–29 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು.

ADVERTISEMENT
ADVERTISEMENT

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೇ ಪಡೆದ ಮುನ್ನಡೆಯನ್ನು ವಾರಿಯರ್ಸ್‌ ಹಂತಹಂತವಾಗಿ ಹೆಚ್ಚಿಸುತ್ತ ಹೋಯಿತು. ಇದು ಎಂಟು ಪಂದ್ಯಗಳಲ್ಲಿ ಬುಲ್ಸ್‌ಗೆ ಆರನೇ ಸೋಲು. ವಾರಿಯರ್ಸ್‌ಗೆ 7 ಪಂದ್ಯಗಳಲ್ಲಿ ಮೂರನೇ ಜಯ

ಟೈಟನ್ಸ್‌ಗೆ ಜಯ: ಇದಕ್ಕೆ ಮೊದಲು, ನಾಟಕೀಯ ಅಂತ್ಯಕಂಡ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್ ತಂಡ 34–33 ಪಾಯಿಂಟ್‌ಗಳಿಂದ ಪುಣೇರಿ ಪಲ್ಟನ್‌ ತಂಡನ್ನು ಸೋಲಿಸಿತು. ವಿರಾಮದ ವೇಳೆ ಸ್ಕೋರ್ 20–20ರಲ್ಲಿ ಸಮನಾಗಿತ್ತು.

ಪವನ್ ಸೆಹ್ರಾವತ್ (12 ಅಂಕ), ವಿಜಯ್ ಮಲಿಕ್ (13 ಅಂಕ) ಟೈಟನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಟೈಟನ್ಸ್‌ಗೆ ಸತತ ನಾಲ್ಕನೇ ಜಯವಾಗಿದ್ದು, ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ADVERTISEMENT

ಭಾನುವಾರ ನೊಯ್ಡಾದಲ್ಲಿ ಪಿಕೆಎಲ್‌ ಎರಡನೇ ಚರಣದ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0