ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

Published 24 ಡಿಸೆಂಬರ್ 2023, 18:38 IST
Last Updated 24 ಡಿಸೆಂಬರ್ 2023, 18:38 IST
ಅಕ್ಷರ ಗಾತ್ರ

ಬೆಂಗಳೂರು: ಶಿವಶಕ್ತಿ ನಾರಾಯಣನ್ ಕೊನೆ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ 1–1ರಿಂದ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಪಂದ್ಯದಲ್ಲಿ ನಾರಾಯಣನ್‌ (90+5ನೇ ನಿ) ಬಿಎಫ್‌ಸಿ ಪರ ಗೋಲು ಗಳಿಸಿದರೆ, ನಾರ್ತ್‌ಈಸ್ಟ್‌ ಪರ ನೆಸ್ಟರ್ ಅಲ್ಬಿಯಾಚ್ (86ನೇ) ಚೆಂಡನ್ನು ಗುರಿ ಸೇರಿಸಿದರು.

ಬಿಎಫ್‌ಸಿ ತಂಡವು ಆಡಿರುವ 12 ಪಂದ್ಯಗಳಲ್ಲಿ ಎರಡನ್ನು ಗೆದ್ದರೆ, ಐದರಲ್ಲಿ ಡ್ರಾ ಸಾಧಿಸಿದೆ. ಉಳಿದ ಐದು ಪಂದ್ಯಗಳನ್ನು ಸೋತು ಒಟ್ಟು 11 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ನಾರ್ತ್‌ಈಸ್ಟ್‌ ತಂಡವು 11 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT