ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ 50 ನಗರಗಳಲ್ಲಿ ಯುವ ಫುಟ್‌ಬಾಲ್ ಪ್ರತಿಭೆಗಳ ಅನ್ವೇಷಣೆ: ಬೈಚುಂಗ್ ಭುಟಿಯಾ

Published : 25 ಸೆಪ್ಟೆಂಬರ್ 2024, 14:25 IST
Last Updated : 25 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿರುವ ಯುವ, ಉತ್ಸಾಹಿ ಫುಟ್‌ಬಾಲ್ ಆಟಗಾರರನ್ನು ಅನ್ವೇಷಿಸಿ, ಅವರನ್ನು ಸಜ್ಜುಗೊಳಿಸುವ ರಾಷ್ಟ್ರವ್ಯಾಪಿ ಬೃಹತ್ ಅಭಿಯಾನಕ್ಕೆ ಫುಟ್‌ಬಾಲ್ ತಾರೆ ಬೈಚುಂಗ್ ಭುಟಿಯಾ ಚಾಲನೆ ನೀಡಿದ್ದಾರೆ.

ಈ ಅಭಿಯಾನವು ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಸೇರಿದಂತೆ ದೇಶದ 50 ನಗರಗಳಲ್ಲಿ ನಡೆಯಲಿದೆ. ಭೈಚಂಗ್ ಭುಟಿಯಾ ಫುಟ್‌ಬಾಲ್ ಸ್ಕೂಲ್ (BBFS) ಹಾಗೂ ಎನ್‌ಜೊಗೊ ಜತೆಗೂಡಿ ನಡೆಸುತ್ತಿರುವ ಈ ಪ್ರತಿಭಾನ್ವೇಷಣೆ ಅಭಿಯಾನದಲ್ಲಿ 9ರಿಂದ 18 ವರ್ಷದೊಳಗಿನ ಸುಮಾರು ಆರು ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದೆನ್ನಲಾಗಿದೆ.

ಆಸಕ್ತರು ಎಐಎಫ್‌ಎಫ್‌ ಅಥವಾ ಎಎಫ್‌ಸಿ ಮಾನ್ಯತೆ ಪಡೆದ ಕೋಚ್‌ಗಳ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಿದೆ. ಇಲ್ಲಿ ಆಯ್ಕೆಯಾದವರಿಗೆ ಬಿಬಿಎಫ್‌ಸಿ ವಸತಿ ಸಹಿತ ಅಕಾಡೆಮಿಯಲ್ಲಿ ಫುಟ್‌ಬಾಲ್‌ ತರಬೇತಿ ಹಾಗೂ ಅವರ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಭುಟಿಯಾ ಹೇಳಿದ್ದಾರೆ.

‘ಭಾರತದಲ್ಲಿ ಫುಟ್‌ಬಾಲ್‌ಗೆ ಒಂದು ಉತ್ತಮ ಅಡಿಪಾಯದ ಅಗತ್ಯವಿದೆ. ಅದು ಯುವ ಜನತೆಯ ಅಭಿವೃದ್ಧಿಯ ಮೂಲಕವೇ ಆರಂಭವಾಗಬೇಕಿದೆ. ನಗರ ಅಥವಾ ಗ್ರಾಮೀಣ ಭಾಗ ಎಲ್ಲಿಂದಲಾದರೂ ಬಂದಿರಲಿ, ಯುವ ಫುಟ್‌ಬಾಲ್ ಆಟಗಾರರಿಗೆ ಸರಿಯಾದ ಮಾರ್ಗದರ್ಶನದ ಮೂಲಕ ಬೆಳೆಸುವುದೇ ನಮ್ಮ ಗುರಿ. ಆ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಮುಂದಿನ ಫುಟ್‌ಬಾಲ್ ತಾರೆಯರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿದ್ದೇವೆ’ ಎಂದಿದ್ದಾರೆ.

‘ಈ ಅಭಿಯಾನವು ಮುಂದಿನ ಏಳು ತಿಂಗಳ ಕಾಲ ನಡೆಯಲಿದೆ. ಪ್ರತಿ ನಗರದಲ್ಲೂ 200 ಜನ ಭಾಗವಹಿಸಲಿದ್ದಾರೆ. ಇದರಲ್ಲಿ ಆಯ್ಕೆಯಾದವರಿಗೆ ಬಿಬಿಎಫ್‌ಸಿ ಸೇರುವ ಅವಕಾಶ ಸಿಗಲಿದೆ’ ಎಂದು ಭುಟಿಯಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT