ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಭಾವಿನಾಬೆನ್ ಪಟೇಲ್ ಪದಕ ಖಾತ್ರಿಪಡಿಸಿ ನೂತನ ಇತಿಹಾಸ ರಚಿಸಿದ್ದಾರೆ.

ಈ ಮೂಲಕ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ವಿಭಾಗದಲ್ಲಿ ಪದಕ ಖಾತ್ರಿಪಡಿಸಿದ ಭಾರತದ ಮೊಟ್ಟ ಮೊದಲ ಕ್ರೀಡಾಪಟು ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್: ದಾಖಲೆ ಮುರಿದ ಗುವೊ ಲಿಂಗ್ಲಿಂಗ್ ‘ಪವರ್’

ಮಹಿಳಾ ಸಿಂಗಲ್ಸ್ ಕ್ಲಾಸ್ 4 ವಿಭಾಗದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ 34 ವರ್ಷದ ಭಾವಿನಾಬೆನ್ ಅವರು ವಿಶ್ವ ನಂ.5 ರ‍್ಯಾಂಕ್‌ನ ಸರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ವಿರುದ್ಧ 11-5 11-6 11-7ರಲ್ಲಿ ಗೆಲುವು ಬಾರಿಸಿದರು.

18 ನಿಮಿಷಗಳ ಅಂತರದಲ್ಲಿ ಕ್ವಾರ್ಟರ್ ಮುಖಾಮುಖಿ ಗೆದ್ದಿರುವ ಭಾವಿನಾಬೆನ್, ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.

ಸೆಮೀಸ್‌ನಲ್ಲಿ ಮತ್ತೊಂದು ಕಠಿಣ ಸವಾಲು ಎದುರಾಗಿದ್ದು, ಚೀನಾದ ಜಾಂಗ್ ಮಿಯಾವೊ ಸವಾಲನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.