ಹೈದರಾಬಾದ್: ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಚಿನ್ನದ ಪದಕ ವಿಜೇತರಾದ ನಿಖತ್ ಜರೀನ್ ಮತ್ತು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಇಶಾ ಸಿಂಗ್ ಅವರಿಗೆ ತೆಲಂಗಾಣ ಸರ್ಕಾರವು ₹ 2 ಕೋಟಿ ಮತ್ತು ವಸತಿ ನಿವೇಶನದ ಕಾಣಿಕೆ ನೀಡಿದೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಈಚೆಗೆ ಟರ್ಕಿಯಲ್ಲಿ ಮತ್ತು ಶೂಟಿಂಗ್ ಜರ್ಮನಿಯಲ್ಲಿ ನಡೆದಿತ್ತು.
ಇಬ್ಬರಿಗೂ ಹೈದರಾಬಾದಿನ ಬಂಜಾರ ಹಿಲ್ಸ್ ಅಥವಾ ಜ್ಯುಬಿಲಿ ಹಿಲ್ಸ್‌ನಲ್ಲಿ ನಿವೇಶನ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಘೋಷಿಸಿದ್ದಾರೆ.