ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್‌: ಪ್ರಮೋದ್‌ಗೆ ಚಿನ್ನ ‘ಡಬಲ್‌’

Last Updated 17 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಸಾವೊ ಪಾಲೊ, ಬ್ರೆಜಿಲ್‌: ಭಾರತದ ಅನುಭವಿ ಆಟಗಾರ ‍ಪ್ರಮೋದ್‌ ಭಗತ್‌ ಅವರು ಬ್ರೆಜಿಲ್‌ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ‘ಡಬಲ್‌’ ಸಾಧನೆ ಮಾಡಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸ್ಪರ್ಧಿಗಳು ಒಟ್ಟು 10 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಪ್ರಮೋದ್‌, ಎಸ್‌ಎಲ್‌ 3 ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ 22–20, 23–21ರಲ್ಲಿ ಭಾರತದವರೇ ಆದ ಮನೋಜ್‌ ಸರ್ಕಾರ್‌ ಅವರನ್ನು ಮಣಿಸಿದರು.

ಎಸ್‌ಎಲ್ 3–ಎಸ್‌ಎಲ್‌ 4 ವಿಭಾಗದ ಡಬಲ್ಸ್‌ ಫೈನಲ್‌ನಲ್ಲಿ ಪ್ರಮೋದ್‌ ಮತ್ತು ಮನೋಜ್‌ 21–11, 21–7ರಲ್ಲಿ ಚೀನಾದ ಚೆನ್‌ ಕ್ಸಿಯಾವ್ಯು ಮತ್ತು ಗಾವೊ ಯುಯಾಂಗ್‌ ವಿರುದ್ಧ ಗೆದ್ದರು.

ಎಸ್‌ಎಲ್‌ 4 ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ಎಸ್‌.ಎಲ್‌.ಯತಿರಾಜ್‌ 9–21, 21–16, 21–19ರಲ್ಲಿ ಫ್ರಾನ್ಸ್‌ನ ಅಗ್ರಶ್ರೇಯಾಂಕದ ಆಟಗಾರ ಲುಕಾಸ್‌ ಮಜರ್‌ಗೆ ಆಘಾತ ನೀಡಿ ಚಿನ್ನದ ಪದಕ ಪಡೆದರು.

ಮಹಿಳೆಯರ ಎಸ್‌ಎಲ್‌ 3 ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಪಾರುಲ್‌ ಡಿ ಪಾರ್ಮರ್‌ 9–21, 14–21ರಲ್ಲಿ ಟರ್ಕಿಯ ಹಲಿಮಾ ಯಿಲ್ದಿಜ್‌ ವಿರುದ್ಧ ಸೋತರು.

ಪುರುಷರ ಎಸ್‌ಎಸ್‌ 6 ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಕೃಷ್ಣ ನಾಗರ್‌ 18–21, 19–21ರಲ್ಲಿ ವಿಕ್ಟರ್‌ ಗೊಂಕಾಲ್ವೆಸ್‌ ಎದುರು ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT