ನೋಯ್ಡಾ: ಹ್ಯಾಟ್ರಿಕ್ ಜಯದೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತೊಂದು ಹ್ಯಾಟ್ರಿಕ್ ಜಯದ ಕನಸಿನೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ.

ಶಹೀದ್ ವಿಜಯ್ ಸಿಂಗ್ ಪಾಠಕ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬುಲ್ಸ್, ಆತಿಥೇಯ ಯು.ಪಿ.ಯೋಧಾವನ್ನು ಎದುರಿಸಲಿದೆ. ‘ಬಿ’ ವಲಯದಲ್ಲಿರುವ ಬುಲ್ಸ್ ಆರನೇ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿತ್ತು. ನಂತರ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಎದೆಗುಂದದ ತಂಡ ಅಕ್ಟೋಬರ್ 31ರಂದು ಪಟ್ನಾ ಪೈರೇಟ್ಸ್ ಮತ್ತು ನವೆಂಬರ್ ಮೂರರಂದು ಯು.ಪಿ.ಯೋಧಾವನ್ನು ಮಣಿಸಿತ್ತು. ಆರು ಪಂದ್ಯಗಳನ್ನು ಆಡಿರುವ ತಂಡದ ಖಾತೆಯಲ್ಲಿ ಈಗ 26 ಪಾಯಿಂಟ್‌ಗಳಿವೆ. ಯು.ಪಿ.ಯೋಧಾ 11 ಪಂದ್ಯಗಳನ್ನು ಆಡಿದ್ದು 28 ಪಾಯಿಂಟ್‌ಗಳೊಂದಿಗೆ ಪಟ್ಟಿಯ ಅಗ್ರ ಸ್ಥಾನದಲ್ಲಿದೆ.

ತವರಿನಲ್ಲಿ ಕಳೆದ ವಾರ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಲು ಸಜ್ಜಾಗಿರುವ ಯೋಧಾಗೆ ಕನ್ನಡಿಗರಾದ ರಿಷಾಂಕ್ ದೇವಾಡಿಗ ಮತ್ತು ಪ್ರಶಾಂತ್ ಕುಮಾರ್ ರೈ ಅವರ ಬಲವಿದೆ. ಜೀವ ಕುಮಾರ್, ರೋಹಿತ್ ಚೌಧರಿ, ಸಚಿನ್ ಕುಮಾರ್, ಆಜಾದ್ ಸಿಂಗ್ ಮತ್ತು ಬಾನು ಪ್ರತಾಪ್ ತೋಮರ್ ಕೂಡ ತಂಡದ ಭರವಸೆಯಾಗಿದ್ದಾರೆ.

ರೋಹಿತ್ ಕುಮಾರ್ ಅವರ ನಾಯಕತ್ವದ ಬುಲ್ಸ್ ಪರವಾಗಿ ಕಾಶಿಲಿಂಗ್ ಅಡಕೆ, ಪವನ್ ಕುಮಾರ್ ಶೆರಾವತ್ ಮತ್ತು ರೋಹಿತ್ ಈ ವರೆಗೆ ಉತ್ತಮ ಆಟವಾಡಿದ್ದು ಗುರುವಾರವೂ ಮಿಂಚುವ ಭರವಸೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.