ಪುಣೆ: ತವರಿನ ಲೆಗ್‌ನ ಆರಂಭದಲ್ಲಿ ಎಡವಿದರೂ ಚೇತರಿಸಿಕೊಂಡಿರುವ ಬೆಂಗಳೂರು ಬುಲ್ಸ್ ತಂಡ ಉತ್ತಮ ಲಯದಲ್ಲಿ ಮುಂದುವರಿಯುತ್ತಿದೆ. ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಭರ್ಜರಿ ಜಯ ಸಾಧಿಸಿರುವ ತಂಡ ವಿರಾಮದ ನಂತರ ಬುಧವಾರ ತೆಲುಗು ಟೈಟನ್ಸ್ ವಿರುದ್ಧ ಸೆಣಸಲಿದೆ.

ಬೆಂಗಳೂರಿನಲ್ಲಿ ಕಂಠೀರವ ಕ್ರೀಡಾಂಗಣದ ಲಭ್ಯ ಇಲ್ಲದ ಕಾರಣ ಬುಲ್ಸ್ ತವರಿನ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಬೆಂಗಳೂರು ವಾರಿಯರ್ಸ್ ಎದುರು ಕೂದಲೆಳೆ ಅಂತರದಲ್ಲಿ (31–33) ತಮಿಳ್ ತಲೈವಾಸ್ ಎದುರು 36–22ರಿಂದ ಗೆದ್ದು ಸಂಭ್ರಮಪಟ್ಟಿತ್ತು. ಪಟ್ನಾ ಪೈರೇಟ್ಸ್ ವಿರುದ್ಧ ಮೂರು ಪಾಯಿಂಟ್‌ಗಳಿಂದ ಸೋತ ತಂಡ ಸೋಮವಾರದ ಪಂದ್ಯದಲ್ಲಿ ಯು.ಪಿ.ಯೋಧಾವನ್ನು 37–27ರಿಂದ ಸೋಲಿಸಿತ್ತು.

‘ಬಿ’ ವಲಯದ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ತಂಡದ ಬಳಿ ಈಗ 52 ಪಾಯಿಂಟ್‌ಗಳಿವೆ. 14 ಪಂದ್ಯಗಳ ಪೈಕಿ ಒಂಬತ್ತನ್ನು ಬುಲ್ಸ್ ಗೆದ್ದಿದೆ. ತವರಿನ ಉಳಿದ ಎರಡು ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿ ಗರಿಷ್ಠ ಪಾಯಿಂಟ್‌ಗಳೊಂದಿಗೆ ಮುಂದೆ ಸಾಗಲು ತಂಡ ಪ್ರಯತ್ನಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.