ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಫ್‌ಸಿ–ಎಚ್‌ಎಫ್‌ಸಿ ಹಣಾಹಣಿ ಇಂದು: ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಲ್ ಪಂದ್ಯ

Published : 18 ಸೆಪ್ಟೆಂಬರ್ 2024, 22:30 IST
Last Updated : 18 ಸೆಪ್ಟೆಂಬರ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ಇಲ್ಲಿಯ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು  ಹೈದರಾಬಾದ್ ಎಫ್‌ಸಿ ವಿರುದ್ಧ ಆಡಲಿದೆ. 

ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಮೊದಲ ಪಂದ್ಯದಲ್ಲಿ ಬಿಎಫ್‌ಸಿ ಜಯಿಸಿತ್ತು. ಆದ್ದರಿಂದ ಅಪಾರ ಆತ್ಮವಿಶ್ವಾಸದಲ್ಲಿ ತಂಡವಿದೆ. ಹೈದರಾಬಾದ್ ತಂಡಕ್ಕೂ ಸೋಲಿನ ರುಚಿ ತೋರಿಸಲು ಸಿದ್ಧವಾಗಿದೆ. ಆ ಪಂದ್ಯದಲ್ಲಿ ಬಿಎಫ್‌ಸಿಯ ಯುವ ಆಟಗಾರ ವಿನಿತ್ ವೆಂಕಟೇಶ್ ಗೋಲು ಹೊಡೆದು ಮಿಂಚಿದ್ದರು.

ನೂರಾರು ಫುಟ್‌ಬಾಲ್ ಪ್ರೇಮಿಗಳ ಸಮ್ಮುಖದಲ್ಲಿ ಮಿಂಚಲು ಬಿಎಫ್‌ಸಿಯ ಎಡ್ಗರ್ ಮೆಂಡಿಸ್, ಪೆಡ್ರೊ ಕಾಪೊ, ರಾಹುಲ್ ಭೆಕೆ, ಅಲ್ಬರ್ಟೊ ನೊಗೆರಾ ಮತ್ತು ಜಾರ್ಜ್ ಪೆರೆಯಾ ದಿಯಾಜ್ ಸಿದ್ಧವಾಗಿದ್ದಾರೆ. ಮುಖ್ಯ ಕೋಚ್ ಜೆರಾರ್ಡ್ ಝರ್ಗೋಜಾ ಅವರ ಮಾರ್ಗದರ್ಶನದಲ್ಲಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದಾರೆ.

‘ಹೈದರಾಬಾದ್ ತಂಡವು ಋತುವಿಗೂ ಮುನ್ನ ಯಾವುದೇ ಪಂದ್ಯವಾಡಿಲ್ಲ. ಆದರೂ ನಾವು ಮೈಮರೆಯುವಂತಿಲ್ಲ. ಈ ಪಂದ್ಯವನ್ನು ಜಯಿಸುವುದು ಸುಲಭವೇನಲ್ಲ. ಈ ಹಿಂದಿನ ಪಂದ್ಯದಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ ಕಾರ್ಯವಾಗಿದೆ’ ಎಂದು ಜೆರಾರ್ಡ್ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT