ಬೆಂಗಳೂರು: ವಿವಿ ಪುರಂನ ಬಿಎಂಎಸ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 11 ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮಟ್ಟದ ಚೆಸ್ ಟೂರ್ನಿಯಲ್ಲಿ ಬಹುಮಾನ ಲಭಿಸಿದೆ.
ಭರತ್ ಕೃಷ್ಣಾ ರಾಜೇಶ್ ₹ 25 ಸಾವಿರ, ಎ.ಹರ್ಷಿಣಿ ₹ 10 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ, ರೋಹಿಲ್.ಆರ್.ಎಲ್. ಅವರು ವಿಶೇಷ ಬಹುಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ಮಾಹಿತಿ ನೀಡಿದೆ.