ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಡ್ರಾ ಪಂದ್ಯದಲ್ಲಿ ಭಾರತ

Last Updated 7 ಮಾರ್ಚ್ 2019, 18:49 IST
ಅಕ್ಷರ ಗಾತ್ರ

ಅಸ್ತಾನಾ, ಕಜಕಸ್ತಾನ: ಗ್ರ್ಯಾಂಡ್‌ಮಾಸ್ಟರ್ ಬಿ. ಅಧಿಬನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಮೋಘ ಆಟವನ್ನು ಗುರುವಾರವೂ ಮುಂದುವರಿಸಿದರು. ಅವರ ಉತ್ತಮ ಆಟದಿಂದಾಗಿ ಭಾರತ ತಂಡವು ಇರಾನ್ ಎದುರು 2–2ರಿಂದ ಡ್ರಾ ಸಾಧಿಸಿತು.

ಅಧಿಬನ್ ಅವರು ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ ಪರಂ ಮಗಸೂದಲೂ ವಿರುದ್ಧ ಗೆದ್ದರು.

ಇನ್ನೊಂದು ಸುತ್ತಿನ ಪಂದ್ಯದಲ್ಲಿ ಇರಾನ್‌ನ ಇದಾನಿ ಪೌಯಾ ಅವರು ಭಾರತದ ಅನುಭವಿ ಆಟಗಾರ ಕೃಷ್ಣನ್ ಶಶಿಕಿರಣ್ ವಿರುದ್ಧ ಗೆದ್ದರು. ಸೂರ್ಯಶೇಖರ್ ಗಂಗೂಲಿ ಮತ್ತು ಎಸ್‌.ಪಿ ಸೇತುರಾಮ್ ಅವರು ತಮ್ಮ ಪಂದ್ಯಗಳಲ್ಲಿ ಕ್ರಮವಾಗಿ ಅಮಿನ್ ತಬಾತಬೀ ಮತ್ತು ಫಿರೋಝ್ ಅಲಿರೇಜಾ ವಿರುದ್ಧ ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT