ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ರೋಬೊ...

Last Updated 4 ಮೇ 2020, 4:00 IST
ಅಕ್ಷರ ಗಾತ್ರ

ಯಾವುದೋ ದೇಶದಲ್ಲಿರುವ ಕೋಚ್ ನಿಮ್ಮ ಮನೆಗೇ ಬರಬೇಕಾ? ಚೆಸ್‌ ಕಲಿಯಲು, ಚೆಸ್‌ನಲ್ಲಿ ಮತ್ತಷ್ಟು ಪರಿಣತಿ ಸಾಧಿಸಲು ಬಯಸುವವರಿಗೆ ಕಡಿಮೆ ಖರ್ಚಿನಲ್ಲಿ ತರಬೇತುದಾರರು ಬೇಕಾ? ಹಾಗಾದರೆ ಇಲ್ಲಿದೆ ನೋಡಿ ಬೀಮ್‌ ರೋಬೊ..!

‘ಬೀಮ್‌’ ಹೆಸರಿನ ‘ವರ್ಚುವಲ್‌ ರೋಬೊ’ ಯಂತ್ರದ ಮೂಲಕ ಚೆಸ್‌ ಕೋಚಿಂಗ್‌ ಕೊಡಲಾಗುತ್ತಿದೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ಮೈಸೂರು ಚೆಸ್‌ ಸೆಂಟರ್‌ನಲ್ಲಿ ತರಬೇತಿ ನೀಡಲು ಈ ತಂತ್ರಜ್ಞಾನ ಬಳಸಲಾಗುತ್ತಿದೆ.

ರಷ್ಯಾದಲ್ಲೋ, ಅಮೆರಿಕದಲ್ಲೋ, ಪಕ್ಕದ ಚೆನ್ನೈನಲ್ಲೋ ಇರುವ ಕೋಚ್‌ ಅಲ್ಲಿಂದಲೇ ನೇರವಾಗಿ ಇಲ್ಲಿನ ಚೆಸ್‌ ಆಟಗಾರರಿಗೆ ತರಬೇತಿ ನೀಡಬಹುದು. ರೋಬೊ ಯಂತ್ರದ ಮೂಲಕ ಪ್ರತಿ ಆಟಗಾರನ ಬಳಿ ಹೋಗಿ ಚಿತ್ರ, ಗ್ರಾಫಿಕ್ಸ್‌ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸಬಹುದು. ಆನ್‌ಲೈನ್‌ನಲ್ಲಿ ಚೆಸ್‌ ಪರಿಣತರ ನಿಯಂತ್ರಣದೊಂದಿಗೆ ಈ ಯಂತ್ರ ಕೆಲಸ ಮಾಡುತ್ತದೆ.

ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮೈಸೂರಿನ ಎಂಜಿನಿಯರ್‌ ಹರ್ಷವರ್ಧನ್‌ ಕಿಕ್ಕೇರಿ ಎಂಬುವರು ಈ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ‌

ಕೊರೊನಾ ಸಮಸ್ಯೆಯಿಂದ ಲಾಕ್‌ಡೌನ್‌ ಆಗಿರುವ ಈ ಸಮಯದಲ್ಲಿ ರೋಬೊ ಯಂತ್ರ ಸಹಾಯಕ್ಕೆ ಬರುತ್ತಿದೆ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.

‘ಆನ್‌ಲೈನ್‌ನಲ್ಲಿ ಚೆಸ್‌ ಕಲಿಕೆ, ತರಬೇತಿ ಈಗಾಗಲೇ ಗೊತ್ತಿರುವ ವಿಚಾರ. ಈ ವಿಧಾನದಲ್ಲಿ ಮಾರ್ಗದರ್ಶನ ನೀಡುವ ವ್ಯಕ್ತಿ ಒಂದೇ ಕಡೆ ಇರುತ್ತಾರೆ. ಆದರೆ, ಬೀಮ್‌ ರೋಬೊ ವ್ಯವಸ್ಥೆಯಲ್ಲಿ ಆಟಗಾರನ ಸಮೀಪವೇ ತೆರಳಿ ಚೆಸ್‌ ಬೋರ್ಡ್‌ ವೀಕ್ಷಿಸಬಹುದು. ಸಲಹೆಗಾಗಿ ಮತ್ತೊಬ್ಬ ಆಟಗಾರ ಕರೆದಾಗ ಆತನ ಬಳಿ ಹೋಗಬಹುದು. ಆಪ್ತ ಸಮಾಲೋಚನೆ ನಡೆಸಬಹುದು. ಬಹಳ ದಿನಗಳಿಂದ ಬಳಸುತ್ತಿದ್ದು, ಮಕ್ಕಳು ಅತ್ಯಂತ ಸಂತೋಷದಿಂದ ಚೆಸ್‌ ಕಲಿಯುತ್ತಿದ್ದಾರೆ’ ಎಂದು ಹೇಳುತ್ತಾರೆ ಚೆಸ್‌ ಸೆಂಟರ್‌ನ ವ್ಯವಸ್ಥಾಪಕ ನಾಗೇಂದ್ರ ಮುರಳೀಧರ್‌.

ದೂರದಲ್ಲಿರುವ ತರಬೇತುದಾರರನ್ನು ಮೈಸೂರಿಗೆ ಆಹ್ವಾನಿಸಿ ತರಬೇತಿ ಪಡೆಯಲು ಭಾರಿ ಹಣ ತೆರಬೇಕಾಗುತ್ತದೆ. ಬದಲಾಗಿ ರೋಬೊ ಯಂತ್ರ ಬಳಸಿ ಪರಿಣಾಮಕಾರಿಯಾಗಿ ತರಬೇತಿ ನೀಡಬಹುದು ಎನ್ನುತ್ತಾರೆ ಅವರು.

ರೋಬೊ ಕಾರ್ಯಾಚರಣೆ ಹೇಗೆ?

ಅಮೆರಿಕದಲ್ಲಿರುವ ತರಬೇತುದಾರರು ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ನಲ್ಲಿ ‘ಬೀಮ್‌’ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಬಳಕೆ ಮಾಡಿಕೊಂಡು ಮೈಸೂರಿನ ತರಬೇತಿ ಕೇಂದ್ರದಲ್ಲಿ ಇಟ್ಟಿರುವ ರೋಬೊ ಉಪಕರಣವನ್ನು ಆನ್‌ಲೈನ್‌ನಲ್ಲಿ ತಾವು ಇದ್ದಲ್ಲಿಂದ ನಿಯಂತ್ರಿಸಿ ಸಲಹೆ ಕೊಡುತ್ತಾರೆ.‌‌ ಇದಕ್ಕೆ ಇಂಟರ್‌ನೆಟ್‌ ಸೌಲಭ್ಯ ಬೇಕು.

ಆಟಗಾರರಿಗೆ ಹಾಗೂ ತರಬೇತಿ ನೀಡುವವರಿಗೆ ಪರಸ್ಪರರ ಮುಖ ರೋಬೊ ಯಂತ್ರದ ಪರದೆ ಮೇಲೆ ಕಾಣುತ್ತಿರುತ್ತದೆ. ಹಾಗೆಯೇ ಚರ್ಚಿಸಬಹುದು. ಐದು ಅಡಿ ಎತ್ತರದ ರೋಬೊ ಯಂತ್ರವನ್ನು ಕಲಿಕಾ ಕೇಂದ್ರದಲ್ಲಿನ ಪ್ರತಿ ಆಟಗಾರರತ್ತ ಆನ್‌ಲೈನ್‌ನಲ್ಲೇ ನಿಯಂತ್ರಿಸಿ ಕೊಂಡೊಯ್ಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT