ಬೆಂಗಳೂರು: ಒಂದು ಸುತ್ತಿನ ಆಟ ಬಾಕಿ ಇರುವಂತೆ ಹಾಲಿ ಚಾಂಪಿಯನ್ ಉಕ್ರೇನ್ ಝಿಲ್ಟ್ಝೋವಾ ಲಿಸೆಂಕೊ ಲುಬೋವ್ ಅವರು ಐಬಿಸಿಎ 12ನೇ ವಿಶ್ವ ಮಹಿಳಾ ಅಂಧರ ಚೆಸ್ ಚಾಂಪಿಯನ್ಷಿಪ್ನ ಪ್ರಶಸ್ತಿ ಖಚಿತಪಡಿಸಿಕೊಂಡರು.

ನಗರದ ಚಾನ್ಸರಿ ಪೆವಿಲಿಯನ್ನಲ್ಲಿ ನಡೆಯು ತ್ತಿರುವ ಈ ಕೂಟದಲ್ಲಿ ಶನಿವಾರ, ಲುಬೋವ್ ಅವರು ಎಂಟನೇ ಸುತ್ತಿನಲ್ಲಿ ವಿಯೆಟ್ನಾಂನ ಫಾಮ್ ಥಿ ಹುವಾಂಗ್ ಅವರನ್ನು ಸೋಲಿಸಿದರು. 12 ವರ್ಷಗಳಿಂದ ಪ್ರಶಸ್ತಿ ಗೆಲ್ಲುತ್ತ ಬಂದಿರುವ ಲುಬೋವ್ ಎಂಟು ಸುತ್ತುಗಳಿಂದ ಗರಿಷ್ಠ 8 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

ಪೋಲೆಂಡ್ ಆಟಗಾರ್ತಿ ಇಗೆಮನ್ ಎಮಿಲಿಯಾ 6.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪೋಲೆಂಡ್ನ ಮತ್ತೊಬ್ಬ ಸ್ಪರ್ಧಿ ಟ್ರಿಯಾನ್ಸ್ಕಾ ಎಮಿಲಿಯಾ 6 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಜೂಲಿಯಾಗೆ ಅಗ್ರಸ್ಥಾನ: ಜೂನಿಯರ್ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ (ಪೋಲೆಂಡ್) ಎಂಟನೇ ಸುತ್ತಿನ ನಂತರ 7 ಪಾಯಿಂಟ್ಗಳೊಡನೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಜೂಲಿಯಾ ಅವರು ಭಾರತದ ರಾಹುಲ್ ವಘೇಲಾ ವಿರುದ್ಧ ಜಯಗಳಿಸಿದರು. ಅಗ್ರ ಶ್ರೇಯಾಂಕದ ಪೋಲೆಂಡ್ನ ರೇಸಿಸ್ ಮೈಕೆಲ್ (6.5), ಭಾರತದ ರಾಹುಲ್ ಸಾಹ್ನಿ ವಿರುದ್ಧ ಗೆಲುವು ದಾಖಲಿಸಿ ಎರಡನೇ ಸ್ಥಾನದಲ್ಲಿ ಮುಂದುವರಿದರು. ಈ ವಿಭಾಗದಲ್ಲಿ 12 ಮಂದಿ ಕಣದಲ್ಲಿದ್ದು, ಜೂಲಿಯಾ ಏಕಮಾತ್ರ ಮಹಿಳಾ ಸ್ಪರ್ಧಿ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.