ಚಾಂಗ್ಝೌ: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಂಗಳವಾರ ಆರಂಭವಾಗುವ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಆಗಸ್ಟ್ 25ರಿಂದ 31ರವರೆಗೆ ಪ್ಯಾರಿಸ್ನಲ್ಲಿ ವಿಶ್ವ ಚಾಂಪಿಯನ್ಷಿಪ್ ನಡೆಯಲಿದ್ದು, ಅದರ ಪೂರ್ವಾಭ್ಯಾಸಕ್ಕೆ ಈ ಟೂರ್ನಿಯು ವೇದಿಕೆಯಾಗಿದೆ. ಸಾತ್ವಿಕ್–ಚಿರಾಗ್ ಅವರು ಜಪಾನ್ನ ಕೀನ್ಯಾ ಮಿತ್ಸುಹಾಶಿ ಮತ್ತು ಹಿರೋಕಿ ಒಕಮುರಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಭಾರತದ ಜೋಡಿಯ ಪ್ರಸಕ್ತ ಋತುವಿನ ಮೂರು ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಿದೆ. ಸಾತ್ವಿಕ್ ಅವರ ಆರೋಗ್ಯ ಸಮಸ್ಯೆ ಮತ್ತು ಚಿರಾಗ್ ಅವರ ಬೆನ್ನುನೋವಿನಿಂದಾಗಿ ಹಲವು ಟೂರ್ನಿಗಳನ್ನು ತಪ್ಪಿಸಿಕೊಂಡಿದೆ.

ಒಟ್ಟು 17.25 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಈ ಟೂರ್ನಿಯ ಸಿಂಗಲ್ಸ್ನಲ್ಲಿ ಭಾರತದ ತಾರೆಯರಾದ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಮತ್ತು ಪಿ.ವಿ.ಸಿಂಧು ಕಣಕ್ಕೆ ಇಳಿಯಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಸೇನ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಲಿ ಶಿ ಫೆಂಗ್ (ಚೀನಾ) ಅವರನ್ನು ಎದುರಿಸಲಿದ್ದಾರೆ. ಏಷ್ಯನ್ ಗೇಮ್ಸ್ ಕಂಚು ವಿಜೇತ ಪ್ರಣಯ್ ಅವರು ಜಪಾನ್ನ ಕೋಕಿ ವಟನಾಬೆ ಅವರ ವಿರುದ್ಧ ಅಭಿಯಾನ ಆರಂಭಿಸುವರು.

ಲಯಕ್ಕಾಗಿ ಪರದಾಡುತ್ತಿರುವ ಒಲಿಂಪಿಕ್ಸ್ ಎರಡು ಪದಕ ವಿಜೇತೆ ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ಕಠಿಣ ಸ್ಪರ್ಧೆ ಎದುರಾಗಿದೆ. ಆರನೇ ಶ್ರೇಯಾಂಕದ ಟೊಮೊಕಾ ಮಿಯಾಜಾಕಿ (ಜಪಾನ್) ಅವರ ಸವಾಲನ್ನು ಸಿಂಧು ಎದುರಿಸಲಿದ್ದಾರೆ. ಉದಯೋನ್ಮುಖ ಆಟಗಾರ್ತಿಯರಾದ ಉನ್ನತಿ ಹೂಡಾ, ಅನುಪಮಾ ಉಪಾಧ್ಯಾಯ ಅವರೂ ಸ್ಪರ್ಧಾ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.