ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಚೋಪ್ರಾಗೆ ಕ್ಲಾಸ್ ಬಾರ್ಟೊನೀಜ್ ಕೋಚ್

Last Updated 2 ಜನವರಿ 2022, 14:43 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಕೋಚ್ ಕ್ಲಾಸ್ ಬಾರ್ಟೊನೀಜ್ ಅವರ ಒಪ್ಪಂದವನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ವಿಸ್ತರಿಸಲಾಗಿದೆ.ಜರ್ಮನಿಯ ಕ್ಲಾಸ್ ಬಯೋ ಮೆಕ್ಯಾನಿಕಲ್ ಪರಿಣತರೂ ಆಗಿದ್ದಾರೆ.

‘ಜಾವೆಲಿನ್ ಥ್ರೋ ಚಿನ್ನದ ಪದಕ ವಿಜೇತ ಚೋಪ್ರಾ ಅವರ ಕೋಚ್ ಆಗಿ ಕ್ಲಾಸ್ ಪ್ಯಾರಿಸ್ ಒಲಿಂಪಿಕ್ಸ್‌ನವರೆಗೂ ಮುಂದುವರಿಯುವರು’ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.

2018ರಲ್ಲಿ ನೀರಜ್ ಅವರ ಮೊಣಕೈ ಶಸ್ತ್ರಚಿಕಿತ್ಸೆಯ ನಂತರ ಮತ್ತು ಮೊದಲು ಕೋಚ್ ಆಗಿದ್ದ ವಿಶ್ವದಾಖಲೆ ಜಾವೆಲಿನ್ ಥ್ರೋ ಅಥ್ಲೀಟ್ ಯುವೆ ಹಾನ್ಅವರ ನಂತರ ಕ್ಲಾಸ್ ನೇಮಕವಾಗಿದ್ದರು.

400 ಮೀಟರ್ಸ್ ಓಟದ ಕೋಚ್ ಗಲಿನಾ ಬುಕಾರಿನಾ ಅವರನ್ನೂ ಮುಂದುವರಿಸಲಾಗಿದೆ. ಇದೇ ವರ್ಷ ಚೀನಾದ ಹಾಂಗ್ಜುನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನವರೆಗೂ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಎಎಫ್‌ಐ ತಿಳಿಸಿದೆ.

ಅವರ ಮಾರ್ಗದರ್ಶನದಲ್ಲಿ ಪುರುಷರ 4X400 ಮೀಟರ್ಸ್ ರಿಲೆ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಏಷ್ಯನ್ ದಾಖಲೆ ಮಾಡಿತ್ತು. ತಂಡದಲ್ಲಿ ಮೊಹಮ್ಮದ್ ಅನಾಸ್ ಯಾಹ್ಯಾ, ನೊಹ್ ನಿರ್ಮಲ್ ಟಾಮ್, ಆರೊಕಿಯಾ ರಾಜೀವ್ ಮತ್ತು ಅಮೋಜ್ ಜಾಕೋಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT