ಕ್ರಿಕೆಟಿಗ ಎಂ.ಎಸ್.ಧೋನಿ ಮತ್ತು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ನೆಚ್ಚಿನ ಕ್ರೀಡಾಪಟುಗಳು.ಚಿಕ್ಕವನಿದ್ದಾಗ ಧೋನಿ ಅವರಿಂದ ಮತ್ತು ಈಗ ಜೊಕೊವಿಚ್‌ರಿಂದಸ್ಫೂರ್ತಿ ಪಡೆದಿದ್ದೇನೆ.
ಡಿ.ಗುಕೇಶ್, ವಿಶ್ವ ಚೆಸ್ ಚಾಂಪಿಯನ್
ಗುಕೇಶ್ ಅವರ ಈ ಗೆಲುವು, ಚೆಸ್ ಇತಿಹಾಸದ ಪುಟದಲ್ಲಿ ದಾಖಲಾಗಿರುವುದು ಮಾತ್ರವಲ್ಲ ಕೋಟಿ ಕೋಟಿ ಯುವ ಮನಸ್ಸುಗಳಿಗೆ ಕನಸು ಕಾಣಿರಿ, ಅದನ್ನು ಸಾಧಿಸಿ ಎನ್ನುವ ಸ್ಫೂರ್ತಿಯನ್ನೂ ತುಂಬುತ್ತಿದೆ
ನರೇಂದ್ರ ಮೋದಿ, ಪ್ರಧಾನಿ
18ನೇ ವಯಸ್ಸಿಗೆ ವಿಶ್ವ ಚಾಂಪಿಯನ್ ಆಗುವುದು ಎಂದರೆ ಸಣ್ಣ ಮಾತಲ್ಲ. ಇದೊಂದು ಅಭೂತಪೂರ್ವವಾದುದು. ಗೆಲುವನ್ನು ಆತ ಸಂಭ್ರಮಿಸಿದ್ದು ನೋಡುವುದಕ್ಕೆ ಅದ್ಬುತ ದೃಶ್ಯವಾಗಿತ್ತು
ವಿಶ್ವನಾಥನ್ ಆನಂದ್, ಚೆಸ್ ದಿಗ್ಗಜ
ಭಾರತಕ್ಕೆ ಅತ್ಯಂತ ಹೆಮ್ಮೆ ತಂದುಕೊಟ್ಟಿದ್ದಾರೆ. ಚೆಸ್‌ನಲ್ಲಿ ಭಾರತ ಹೊಂದಿರುವ ಪಾರಮ್ಯವನ್ನು ಈ ಗೆಲುವು ಸಾಬೀತು ಮಾಡಿತು. ಪ್ರತಿಯೊಬ್ಬ ಭಾರತೀಯನ ಪರವಾಗಿ ನಿನ್ನ ಉಜ್ವಲ ಭವಿಷ್ಯಕ್ಕೆ ಶುಭಕಾಮನೆಗಳು
ದ್ರೌಪದಿ ಮುರ್ಮು, ರಾಷ್ಟ್ರಪತಿ
ವಿಶ್ವ ಚೆಸ್ ಪರಂಪರೆಯಲ್ಲಿ ಭಾರತದ ಸಾಧನೆಯು ಗುಕೇಶ್ ಗೆಲುವಿನ ಮೂಲಕ ಮುಂದುವರಿದಿದೆ. ಮತ್ತೊಬ್ಬ ವಿಶ್ವ ಚಾಂಪಿಯನ್ ಅನ್ನು ಜಗತ್ತಿಗೆ ನೀಡುವುದರ ಮೂಲಕ ಚೆನ್ನೈ ನಗರವು ವಿಶ್ವ ಚೆಸ್ ರಾಜಧಾನಿ ಎಂದು ಮತ್ತೊಮ್ಮೆ ಸಾಬೀತಾಯಿತು
ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ನೀವು ದೇಶವು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಇದೊಂದು ಅಸಾಧಾರಣ ಸಾಧನೆ. ದೃಢ ನಿಶ್ಚಯವೊಂದಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದನ್ನು ನಿಮ್ಮ ಕಠಿಣ ಪರಿಶ್ರಮ ತೋರಿಸಿಕೊಟ್ಟಿದೆ