ಪ್ಯಾರಿಸ್: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಇಬ್ಬರು ಸೇರಿ ಒಟ್ಟು ನಾಲ್ಕು ಮಂದಿ ರಷ್ಯಾದ ಅಥ್ಲೀಟ್ಗಳು ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದಾರೆ.

ಕೆನಡಾದ ವಕೀಲ ರಿಚರ್ಡ್ ಮೆಕ್ಲಾರೆನ್ ಅವರ ವರದಿಯ ಆಧಾರದಲ್ಲಿ ಈ ಅಥ್ಲೀಟ್ಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಥ್ಲೆಟಿಕ್ಸ್ ಇಂಟಿಗ್ರಿಟಿ ಯೂನಿಟ್ (ಐಎಯು) ಶನಿವಾರ ತಿಳಿಸಿದೆ.

2008ರ ಒಲಿಂಪಿಕ್ಸ್ನ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಆ್ಯಡ್ರೆ ಸಿಲ್ನೋವ್, 2012ರ ಲಂಡನ್ ಒಲಿಂಪಿಕ್ಸ್ನ 400 ಮೀಟರ್ಸ್ ಹರ್ಡಲ್ಸ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ನಟಾಲಿಯಾ ಅಂತ್ಯುಖ್ ಅವರಿಗೆ ಕ್ರೀಡಾ ನ್ಯಾಯಾಲಯವು (ಸಿಎಎಸ್) ಕಠಿಣ ಶಿಕ್ಷೆ ನೀಡುವ ನಿರೀಕ್ಷೆ ಇದೆ.

2007ರ ವಿಶ್ವ ಚಾಂಪಿಯನ್ಷಿಪ್ನ 1,500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಯೆಲೆನಾ ಸೊಬೊಲೆವಾ ಹಾಗೂ ಹ್ಯಾಮರ್ ಥ್ರೋ ಸ್ಪರ್ಧಿ ಒಕ್ಸಾನ ಕೊಂಡ್ರಾತ್ಯೆವಾ ಅವರೂ ಉದ್ದೀಪನಾ ಮದ್ದು ಸೇವನೆ ಆರೋಪ ಎದುರಿಸುತ್ತಿದ್ದಾರೆ.

ಸಿಲ್ನೋವಾ ಅವರು ನಿವೃತ್ತಿಯ ಬಳಿಕ ರಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.