ನೆಪೋಲಿ, ಇಟಲಿ: ಭಾರತದ ದ್ಯುತಿ ಚಾಂದ್ ಅವರು ವಿಶ್ವ ಯುನಿವರ್ಸೇಡ್ ಕ್ರೀಡಾಕೂಟದ 200 ಮೀ. ಫೈನಲ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮೂರು ದಿನಗಳಲ್ಲಿ ಅವರು ಭಾಗವಹಿಸಿದ್ದ ಐದನೇ ಸ್ಪರ್ಧೆ ಇದು.

ದ್ಯುತಿ 23.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನಿರಾಸೆಗೊಳಿಸಿದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚು ಗೆದ್ದಾಗ 23.24 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. 200 ಮೀ. ಸ್ಪರ್ಧೆಯನ್ನು 23 ಸೆಕೆಂಡ್‌ಗಳಲ್ಲಿ ಕೊನೆಗೊಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ.

ಭಾರತದ ಪುರುಷರ ತಂಡ 4*100 ಮೀ. ರಿಲೇಯ ಹೀಟ್ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯಿತು. ಒಟ್ಟಾರೆ 11ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಭಾರತದ ಅಥ್ಲೀಟ್‌ಗಳು 40.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.