ಬೆಂಗಳೂರು: ಮೂರನೇ ಶ್ರೇಯಾಂಕದ ಮಾನ್ಯುಯೆಲ್ ಪೆಟ್ರೋಸಿಯಾನ್ (ಅರ್ಮೇನಿಯಾ) ಸೇರಿದಂತೆ ಐದು ಆಟಗಾರರು, ‘ನಮ್ಮ ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ’ಯ ಏಳನೇ ಸುತ್ತಿನ ನಂತರ ತಲಾ ಆರು ಅಂಕಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮಂಗಳವಾರ 14 ಮಂದಿ ಆಟಗಾರರು ತಲಾ ಐದೂವರೆ ಅಂಕ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಇವರಲ್ಲಿ ಅಗ್ರ ಶ್ರೇಯಾಂಕದ ಪಾ.ಇನಿಯನ್ ಸೇರಿದ್ದಾರೆ.

ಪೆಟ್ರೋಸಿಯಾನ್ ಜೊತೆ, ಉಜ್ಬೇಕಿಸ್ತಾನದ ಮರಾತ್ ಝುಮಯೇವ್, ಜಾರ್ಜಿಯಾದ ಲೆವನ್ ಪೆಂಟ್ಸುಲಾಯಿಯ, ಭಾರತದ 13 ವರ್ಷ ವಯಸ್ಸಿನ ಐಎಂ ಇತನ್ ವಾಝ್, ನಿತಿನ್ ಬಾಬು ಅವರು ಮುನ್ನಡೆಯಲ್ಲಿದ್ದಾರೆ.

ವಾಜ್ ಮತ್ತು ಪೆಟ್ರೋಸಿಯಾನ್ ನಡುವಣ ಮೊದಲ ಬೋರ್ಡ್ ಪಂದ್ಯ 28 ನಡೆಗಳ ನಂತರ ಡ್ರಾ ಕಂಡಿತು. ಲೆವನ್ 33 ನಡೆಗಳಲ್ಲಿ ಪದ್ಮಿನಿ ರಾವುತ್ ಅವರನ್ನು, ಝಮಯೇವ್, ಭಾರತದ ನಿತೀಶ್ ಬೇಲೂರಕರ್ ಅವರನ್ನು ಮಣಿಸಿದರು. ನಿತಿನ್ ಬಾಬು 102 ನಡೆಗಳ ದೀರ್ಘ ಪಂದ್ಯದಲ್ಲಿ ಆಯುಷ್ ಶರ್ಮಾ ವಿರುದ್ಧ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.