ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ ಫೈವ್ಸ್‌: ಅಕೌಂಟೆಂಟ್‌ ತಂಡಕ್ಕೆ ಪ್ರಶಸ್ತಿ

Published 15 ಜೂನ್ 2024, 16:23 IST
Last Updated 15 ಜೂನ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಅಕೌಂಟೆಂಟ್‌ ಜನರಲ್‌ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ ತಂಡವು ಹಾಕಿ ಕರ್ನಾಟಕ ಫೈವ್ಸ್‌ ಪುರುಷರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಶನಿವಾರ ನಡೆದ ಫೈನಲ್‌ನಲ್ಲಿ ಅಕೌಂಟೆಂಟ್‌ ತಂಡವು 3–1ರಿಂದ ಕೆನರಾ ಬ್ಯಾಂಕ್‌ ತಂಡವನ್ನು ಸೋಲಿಸಿತು. ಮೂರನೇ ಸ್ಥಾನ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ನೈಋತ್ಯ ರೈಲ್ವೆ ತಂಡವು 5–4ರಿಂದ ಯುವ ಸಬಲೀಕರಣ ಕ್ರೀಡಾ ಇಲಾಖೆಯ ‘ಬಿ’ ತಂಡವನ್ನು ಮಣಿಸಿತು. ಮೊದಲ ಮೂರು ಸ್ಥಾನ ಪಡೆದ ತಂಡಗಳು ಕ್ರಮವಾಗಿ ₹30 ಸಾವಿರ, ₹20 ಸಾವಿರ ಮತ್ತು ₹ 10 ಸಾವಿರ ನಗದು ಬಹುಮಾನ ಪಡೆದವು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಕೆನರಾ ಬ್ಯಾಂಕ್‌ ತಂಡವು 4–1ರಿಂದ ರೈಲ್ವೆ ತಂಡವನ್ನು; ಅಕೌಂಟೆಂಟ್‌ ತಂಡವು 5–5 (3–2 ಪೆನಾಲ್ಟಿ ಶೂಟೌಟ್‌) ರಿಂದ ಯುವ ಸಬಲೀಕರಣ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು.

ಹಾಕಿ ಇಂಡಿಯಾ ಮಾಸ್ಟರ್ಸ್ ಕಪ್‌ (40 ವರ್ಷ ಮೇಲಿನವರ) ಟೂರ್ನಿಯಲ್ಲಿ ಬೆಂಗಳೂರು ಬ್ಲೂಸ್‌ ಪ್ರಶಸ್ತಿ ಗೆದ್ದುಕೊಂಡಿತು. ‌ಪ್ರಿಮ್‌ರೋಸ್ ಹಾಕಿ ಕ್ಲಬ್ ಮತ್ತು ಸೈಮನ್ ಹಾಕಿ ಕ್ಲಬ್ ತಂಡಗಳು ಕ್ರಮವಾಗಿ ರನ್ನರ್ಸ್‌ ಅಪ್‌ ಮತ್ತು ಮೂರನೇ ಸ್ಥಾನ ಪಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT