ರೊಸಾರಿಯೊ (ಅರ್ಜೆಂಟೀನಾ): ಕನಿಕಾ ಸಿವಾಚ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯ ಕಠಿಣ ಹೋರಾಟದ ಪಂದ್ಯದಲ್ಲಿ ಭಾನುವಾರ ಉರುಗ್ವೆ ತಂಡದ ಮೇಲೆ 3–2 ಗೋಲುಗಳ ಜಯಗಳಿಸಿತು. ಇದು ಭಾರತಕ್ಕೆ ಸತತ ಎರಡನೇ ಗೆಲುವು.

ಕನಿಕಾ ಈ ಪಂದ್ಯದ ಪಂದ್ಯದ 46 ಮತ್ತು 50ನೇ ನಿಮಿಷ ಚೆಂಡನ್ನು ಗುರಿತಲುಪಿಸಿದರು. ಸೋನಮ್ 21ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಮೊದಲ ಗೋಲು ಗಳಿಸಿದ್ದರು.

ಉರುಗ್ವೆ ಪರ ಪಂದ್ಯದ ಮೂರನೇ ನಿಮಿಷ ಮಿಲಾಗ್ರೊಸ್ ಸೀಗಲ್ ಮತ್ತು 24ನೇ ನಿಮಿಷ ಆಗಸ್ಟಿನಾ ಮೇರಿ ಗೋಲು ಗಳಿಸಿದರು.

ಭಾರತ ಮೊದಲ ಪಂದ್ಯದಲ್ಲಿ ಚಿಲಿ ತಂಡವನ್ನು ಸೋಲಿಸಿತ್ತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಆತಿಥೇಯ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.