ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಟ್‌ಗನ್‌ ವಿಶ್ವಕಪ್‌ | ಭಾರತಕ್ಕೆ ಐದನೇ ಸ್ಥಾನ

Published 28 ಮೇ 2023, 13:33 IST
Last Updated 28 ಮೇ 2023, 13:33 IST
ಅಕ್ಷರ ಗಾತ್ರ

ಅಲ್ಮೇಟಿ : ಭಾರತದ ಶೂಟರ್‌ಗಳು ಭಾನುವಾರ ಇಲ್ಲಿ ಕೊನೆಗೊಂಡ ಐಎಸ್‌ಎಸ್‌ಎಫ್‌ ಶಾಟ್‌ಗನ್‌ ವಿಶ್ವಕಪ್‌ನಲ್ಲಿ ಐದನೇ ಸ್ಥಾನ ಪಡೆದುಕೊಂಡರು.

ಕೊನೆಯ ದಿನ ಭಾರತಕ್ಕೆ ಪದಕ ಸಿಗಲಿಲ್ಲ. ಕೂಟದಲ್ಲಿ ಒಟ್ಟಾರೆಯಾಗಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿತು.

ಭಾನುವಾರ ನಡೆದ ಟ್ರ್ಯಾಪ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಪೃಥ್ವಿರಾಜ್‌ ತೊಂಡೈಮನ್‌ ಮತ್ತು ಶ್ರೇಯಸಿ ಸಿಂಗ್‌ ಐದನೇ ಸ್ಥಾನ ಪಡೆದುಕೊಂಡರು. ಅವರು 150 ರಲ್ಲಿ 136 ಪಾಯಿಂಟ್ಸ್‌ ಕಲೆಹಾಕಿದರು. 

ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಜೊರಾವರ್ ಸಂಧು– ಪ್ರೀತಿ ರಜಕ್‌ 134 ಪಾಯಿಂಟ್ಸ್‌ಗಳೊಂದಿಗೆ ಎಂಟನೇ ಸ್ಥಾನ ಗಳಿಸಿತು.

ಕಜಕಸ್ತಾನದ ಮರಿಯಾ ದಿಮಿತ್ರಿಯೆಂಕೊ– ವಿಕ್ಟರ್‌ ಖಾಸಿಯನೊವ್‌ ಅವರು ಒಟ್ಟು 142 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ಗೆದ್ದರು. ಟರ್ಕಿ ಮತ್ತು ಇರಾನ್‌ ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT