ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್ ಕೂಟದಲ್ಲಿ ‘ಇಂಡಿಯಾ ಹೌಸ್’ ಸ್ಥಾಪಿಸಿದ ರಿಲಯನ್ಸ್ ಫೌಂಡೇಷನ್

Published 29 ಜೂನ್ 2024, 14:09 IST
Last Updated 29 ಜೂನ್ 2024, 14:09 IST
ಅಕ್ಷರ ಗಾತ್ರ

ಮುಂಬೈ: ಇದೇ ಮೊದಲ ಬಾರಿಗೆ ಪ್ಯಾರಿಸ್‌ ಒಲಿಂಪಿಕ್ಸ್ ಕೂಟದಲ್ಲಿ ‘ಇಂಡಿಯಾ ಹೌಸ್‌’ ಸ್ಥಾಪಿಸಲಾಗಿದೆ. ಇಲ್ಲಿ ಭಾರತದ ಸಮೃದ್ಧ ಕ್ರೀಡಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ‘ದೇಶದಿಂದ ಹೊರಗಿರುವ ಭಾರತದ ಅಥ್ಲೀಟುಗಳಿಗೆ’ ಇದು ‘ಹೊರದೇಶದ  ವಾಸ್ತವ್ಯದ ತಾಣವಾಗಲಿದೆ’.

ಭಾರತ ಒಲಿಂಪಿಕ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ರಿಲಯನ್ಸ್‌ ಫೌಂಡೇಷನ್ ಪರಿಕಲ್ಪನೆಯಡಿ ಇಂಡಿಯಾ ಹೌಸ್‌ ಮೂಡಿಬಂದಿದೆ ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ನೀತಾ ಅಂಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ನೂರು ವರ್ಷಗಳಾದ ಸಂದರ್ಭದಲ್ಲಿ ಇಂಡಿಯಾ ಹೌಸ್‌ ತಲೆಯೆತ್ತಿದೆ. ‘ಪಾರ್ಕ್‌ ಆಫ್‌ ನೇಷನ್ಸ್‌’ (ಪಾರ್ಕ್‌ ಡಿ ಲಾ ವಿಲ್ಲೆ) ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇದರ ಸುತ್ತ ಇತರ 14 ದೇಶಗಳ ಆತಿಥ್ಯಗೃಹಗಳು ತಲೆಯೆತ್ತಲಿವೆ. ನೆದರ್ಲೆಂಡ್ಸ್‌, ಕೆನಡಾ, ಬ್ರೆಜಿಲ್ ಮತ್ತು ಫ್ರಾನ್ಸ್‌ ಇವುಗಳಲ್ಲಿ ಒಳಗೊಂಡಿವೆ.ಭಾ ರತ ಒಲಿಂಪಿಕ್ಸ್‌ನಲ್ಲಿ ಮಾಡಿರುವ ಸಾಧನೆಗಳನ್ನು ಇದು ಪ್ರತಿಬಿಂಬಿಸಲಿದೆ ಎಂದು ಪಿ.ಟಿ.ಉಷಾ ತಿಳಿಸಿದ್ದಾರೆ.

ಇತರ ದೇಶಗಳ ಕ್ರೀಡಾಪಟುಗಳು, ಅಭಿಮಾನಿಗಳಿಗೂ ಇಲ್ಲಿಗೆ ಭೇಟಿ ನೀಡಬಹುದು. ಸಂಸ್ಕೃತಿ, ಕಲೆಯ ಜೊತೆ ಸಂಗೀತ, ನೃತ್ಯ ತಂಡಗಳಿಂದ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ದಂತಕಥೆಯಾಗಿರುವ ಕ್ರೀಡಾಪಟುಗಳ ಜೊತೆ ಸಂವಾದ, ಮಾತುಕತೆ ನಡೆಸಲೂ ಇದು ವೇದಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT