ಮಂಗಳವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು 2–3 ಗೋಲುಗಳಿಂದ ಜರ್ಮನಿ ವಿರುದ್ಧ ಸೋತಿತು. ನಾಲ್ಕರ ಘಟ್ಟದ ರೋಚಕ ಹಣಾಹಣಿಯಿಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ (7ನೇ ನಿಮಿಷ) ಹಾಗೂ ಸುಖಜೀತ್ ಸಿಂಗ್ (36ನೇ ನಿ) ಗೋಲು ಗಳಿಸಿದರು. ಜರ್ಮನಿಯ ಗೋಂಜಾಲೊ ಪೀಲತ್ (18ನಿ), ಕ್ರಿಸ್ಟೋಫರ್ ರೂರ್ (27ನೇ ನಿ) ಮತ್ತು ಮಾರ್ಕೊ ಮಿಲ್ಕಾವು (54ನಿ) ಗೋಲು ಹೊಡೆದರು.