ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌: ಭಾರತ ತಂಡಗಳ ಶುಭಾರಂಭ

Published 12 ಜೂನ್ 2024, 19:42 IST
Last Updated 12 ಜೂನ್ 2024, 19:42 IST
ಅಕ್ಷರ ಗಾತ್ರ

ಡೇಲಿಯನ್‌, ಚೀನಾ: ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಇಲ್ಲಿ ನಡೆಯುತ್ತಿರುವ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಶುಭಾರಂಭ ಮಾಡಿವೆ.

ಅನುಭವಿ ಆಟಗಾರ ಅಭಯ್‌ ಸಿಂಗ್‌ ಅನುಪಸ್ಥಿತಿಯಲ್ಲಿ ಭಾರತದ ಪುರುಷರ ತಂಡವು 2–1ರಿಂದ ಕುವೈಟ್‌ ತಂಡವನ್ನು ಮಣಿಸಿತು.

ಮಹಿಳೆಯರ ತಂಡವು ಮಕಾವ್‌ ತಂಡವನ್ನು 2–1ರಿಂದ ಮತ್ತು ಕುವೈತ್‌ ಮಂಗೋಲಿಯಾ ತಂಡವನ್ನು 3–0 ಯಿಂದ ಮಣಿಸಿತು.

ವೆಲವನ್ ಸೆಂಥಿಲ್‌ಕುಮಾರ್ ಮತ್ತು ಸೂರಜ್ ಕುಮಾರ್ ಚಂದ್ ತಮ್ಮ ಸುತ್ತಿನಲ್ಲಿ ಗೆದ್ದರೆ, ರಾಹುಲ್ ಬೈಟಾ ಪರಾಭವಗೊಂಡರು. 

ಮಕಾವ್‌ ವಿರುದ್ಧ ರಿಥಿಕಾ, ಜಾನೆಟ್ ವಿಧಿ ತಮ್ಮ ಸುತ್ತಿಗಳಲ್ಲಿ ಗೆಲುವು ಸಾಧಿಸಿದರೆ, ಪೂಜಾ ಭಟ್‌ ಸೋತರು. ಆದರೆ, ಮಂಗೋಲಿಯಾ ವಿರುದ್ಧ ರಿಥಿಕಾ, ಪೂಜಾ ಮತ್ತು ಸುನೀತಾ ಪಟೇಲ್‌ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT