ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಭಾರತದಿಂದ ಬಿಡ್‌: ಪ್ರಧಾನಿ ನರೇಂದ್ರ ಮೋದಿ

ಐಒಸಿ ಅಧಿವೇಶನ ಉದ್ಘಾಟಿಸಿದ ಪ್ರಧಾನಿ
Published 14 ಅಕ್ಟೋಬರ್ 2023, 17:33 IST
Last Updated 14 ಅಕ್ಟೋಬರ್ 2023, 17:33 IST
ಅಕ್ಷರ ಗಾತ್ರ

ಮುಂಬೈ: ಭಾರತವು 2036ರ ಬೇಸಿಗೆ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಖಚಿತಪಡಿಸಿದರು.

ಇಲ್ಲಿನ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 141ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಕಾತರದಿಂದ ಇದೆ. 2036ರ ಒಲಿಂಪಿಕ್ಸ್‌ ಯಶಸ್ವಿಯಾಗಿ ಸಂಘಟಿಸಲು ಸಿದ್ಧತೆಯಲ್ಲಿ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತದೆ. ಇದು 140 ಕೋಟಿ ಭಾರತೀಯರ ಕನಸು’ ಎಂದು ಪ್ರಧಾನಿ ಹೇಳಿದರು. ವಿಶ್ವಕಪ್‌ನಲ್ಲಿ ಭಾರತ, ಪಾಕ್‌ ವಿರುದ್ಧ ಗೆದ್ದ ವಿಷಯವನ್ನೂ ಅವರು ಸಭೆಗೆ ಕರತಾಡನದ ಮಧ್ಯೆ ತಿಳಿಸಿದರು.

ಭಾರತವು 2029ರ ಯುವ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಕೂಡ ಕಾತರದಿಂದ ಕಾಯುತ್ತಿದೆ ಎಂದು ಮೋದಿ ಹೇಳಿದರು.

‘2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಐಒಸಿ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ನಾವು ಈ ನಿಟ್ಟಿನಲ್ಲಿ ಸಕಾರಾತ್ಮಕ ಸುದ್ದಿ ಕೇಳುವೆವು ಎಂಬ ವಿಶ್ವಾಸವಿದೆ’ ಎಂದರು.

ಟರ್ಕಿ, ಇಂಡೋನೇಷ್ಯಾ, ಮೆಕ್ಸಿಕೊ, ಪೋಲೆಂಡ್‌ ಕೂಡ 2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT