ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್: ಭಾರತಕ್ಕೆ ಎರಡು ಚಿನ್ನದ ಪದಕ

ಅಗ್ರಸ್ಥಾನದೊಂದಿಗೆ ಮೇಲುಗೈ ಸಾಧಿಸಿದ ಮಲೇಷ್ಯಾ
Published 22 ಫೆಬ್ರುವರಿ 2024, 20:55 IST
Last Updated 22 ಫೆಬ್ರುವರಿ 2024, 20:55 IST
ಅಕ್ಷರ ಗಾತ್ರ

ನವದೆಹಲಿ:  ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಗುರುವಾರ ಭಾರತದ ಸೈಕ್ಲಿಸ್ಟ್‌ಗಳು ಪ್ಯಾರಾ ವಿಭಾಗದಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ. ಐದು ಅಗ್ರ ಸ್ಥಾನಗಳೊಂದಿಗೆ ಮಲೇಷ್ಯಾ ಮೇಲುಗೈ ಸಾಧಿಸಿದೆ.

ಅರ್ಷದ್ ಶೇಖ್ ಮತ್ತು ಜಲಾಲುದ್ದೀನ್ ಅನ್ಸಾರಿ ಸಿ2 15 ಕಿ.ಮೀ ಸ್ಕ್ರಾಚ್ ಫೈನಲ್‌ನಲ್ಲಿ ಚಿನ್ನ-ಬೆಳ್ಳಿ ಗೆದ್ದರೆ, ಮಹಿಳಾ ಸಿ2 ವಿಭಾಗದ 15 ಕಿ.ಮೀ ಸ್ಕ್ರಾಚ್ ಸ್ಪರ್ಧೆಯಲ್ಲಿ ಜ್ಯೋತಿ ಗಡೇರಿಯಾ ವಿಜೇತರಾಗಿದ್ದಾರೆ.

ಸಿ3 ಕ್ಲಾಸ್ 15 ಕಿ.ಮೀ ಸ್ಕ್ರಾಚ್ ವಿಭಾಗದ ಫೈನಲ್‌ನಲ್ಲಿ ಪವನ್ ಕುಮಾರ್ ಕೊಮ್ಮೋಜಿ ಕಂಚಿನ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಮಲೇಷ್ಯಾದ ಆದಿ ರೈಮಿಕ್ ಮತ್ತು ಇಂಡೊನೇಷ್ಯಾದ ಟಿಫಾನ್ ಅಬಿದ್ ಅಲನಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು.

ಪುರುಷರ ಜೂನಿಯರ್ ಸ್ಕ್ರಾಚ್ ರೇಸ್‌ನಲ್ಲಿ ಸುಜಲ್ ಯಾದವ್ ಐದನೇ ಸ್ಥಾನ ಪಡೆದರೆ, ಕಜಕಿಸ್ತಾನ, ಚೈನೀಸ್ ತೈಪೆ ಮತ್ತು ಹಾಂಗ್ ಕಾಂಗ್ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದವು.

ಮಹಿಳೆಯರ ಜೂನಿಯರ್ ಸ್ಕ್ರಾಚ್‌ ಸ್ಪರ್ಧೆಯಲ್ಲಿ ಜೆಪಿ ಧನ್ಯಧಾ ಏಳನೇ ಸ್ಥಾನ ಪಡೆದರೆ, ಚೈನೀಸ್ ತೈಪೆಯ ವೆನ್ ಕ್ಸಿನ್ ಹುವಾಂಗ್ ಚಿನ್ನ ಗೆದ್ದರು.

ಮಹಿಳಾ ಎಲೈಟ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಭಾರತದ ಮಯೂರಿ ಧನರಾಜ್ ಲುಟೆ ಮತ್ತು ತ್ರಿಶ್ಯಾ ಪಾಲ್ ಪದಕಗಳಿಂದ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT