ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಭಾರತ ತಂಡವು ಇದೇ ಮೊದಲ ಬಾರಿಗೆ ‘ಪದಕಗಳ ಶತಕ’ ಬಾರಿಸಿದೆ.
ಕೂಟದ 14 ನೇ ದಿನವಾದ ಶನಿವಾರದ ಆರಂಭಕ್ಕೆ ಭಾರತ ತಂಡವು ಒಟ್ಟು 100 ಪದಕಗಳನ್ನು ಗಳಿಸಿತು.
ಫೈನಲ್ ಕಬಡ್ಡಿಯಲ್ಲಿ ಚೈನೀಸ್ ತೈಪೆ ತಂಡವನ್ನು 26–25ರ ರೋಚಕ ಹಣಾಹಣಿಯಲ್ಲಿ ಮಣಿಸಿದ ಭಾರತ ಮಹಿಳೆಯರ ತಂಡ ಚಿನ್ನದ ಪದಕ ಪಡೆಯುವ ಮೂಲಕ ಶತಕದ ಪದರ್ಪಾಣೆಯನ್ನು ಭಾರತ ಮಾಡಿತು.
2018ರಲ್ಲಿ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಈ ಸಾರಿ ಭಾರತದ ಕ್ರೀಡಾಳುಗಳು 25 ಚಿನ್ನ 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳನ್ನು ಪಡೆದು ಪದಕಗಳ ಪಟ್ಟಿಯಲ್ಲಿ ಶತಕ ಬಾರಿಸಿದರು.
ಪದಕಗಳ ಪಟ್ಟಿಯಲ್ಲಿ ಚೀನಾ 354 ರ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ರಿಪಬ್ಲಿಕ್ ಆಫ್ ಕೊರಿಯಾ 171, ಜಪಾನ್ 169, ಭಾರತ 100.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದಿರುವುದು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಕ್ರೀಡಾಳುಗಳ ಪ್ರತಿಯೊಂದು ವಿಸ್ಮಯಕಾರಿ ಪ್ರದರ್ಶನ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅಕ್ಟೋಬರ್ 10 ರಂದು ನಮ್ಮ ಕ್ರೀಡಾಪಟುಗಳ ಜೊತೆ ಸಂವಹನ ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈವರೆಗಿನ ಪದಕಗಳ ಪಟ್ಟಿ ಇಲ್ಲಿದೆ..