ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊರಾಂಟೊದಲ್ಲಿ ಭಾರತ ಕಂಪನ ಸೃಷ್ಟಿಸಿದೆ: ಗುಕೇಶ್‌ ಕುರಿತು ಗ್ಯಾರಿ ಕ್ಯಾಸ್ಪರೋವ್‌

Published 23 ಏಪ್ರಿಲ್ 2024, 12:19 IST
Last Updated 23 ಏಪ್ರಿಲ್ 2024, 12:19 IST
ಅಕ್ಷರ ಗಾತ್ರ

ನವದೆಹಲಿ: ‘ಟೊರಾಂಟೊದಲ್ಲಿ ಭಾರತ ಕಂಪನ ಸೃಷ್ಟಿಸಿದೆ’ವಾಗಿದೆ ಎಂದು ಬಣ್ಣಿಸಿದವರು ರಷ್ಯದ ಚೆಸ್‌ ದಂತಕಥೆ ಗ್ಯಾರಿ ಕ್ಯಾಸ್ಪರೋವ್‌ ಅವರು, ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್‌ ಎನಿಸಿದ ಡಿ.ಗುಕೇಶ್‌ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

17 ವರ್ಷದ ಗುಕೇಶ್ ಅವರು, ಸ್ವತಃ ಕ್ಯಾಸ್ಪರೋವ್‌ 40 ವರ್ಷದ ಹಿಂದೆ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದರು. 1984ರಲ್ಲಿ ಅನತೋಲಿ ಕಾರ್ಪೋವ್‌ ಅವರಿಗೆ ಚಾಲೆಂಜರ್ ಎನಿಸಿದಾಗ ಕ್ಯಾಸ್ಪರೋವ್‌ ಅವರಿಗೆ  22 ವರ್ಷ ವಯಸ್ಸು.

‘ಅಭಿನಂದನೆಗಳು. ಟೊರಾಂಟೊದಲ್ಲಿ ಭಾರತ ಕಂಪನ ಉಂಟುಮಾಡಿದೆ. ಚೆಸ್‌ ಶಕ್ತಿ ಈಗ ಪಲ್ಲಟಗೊಳ್ಳುತ್ತಿದೆ. 17 ವರ್ಷದ ಡಿ.ಗುಕೇಶ್‌ ಚೆಸ್‌ನ ಅತ್ಯುನ್ನತ ಪ್ರಶಸ್ತಿಗಾಗಿ ಡಿಂಗ್ ಲಿರೆನ್‌ ಈಗ ಅವರನ್ನು ಎದುರಿಸಲಿದ್ದಾರೆ’ ಎಂದು ಕ್ಯಾಸ್ಪರೋವ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ಹಲವು ದಶಕಗಳ ಕಾಲ ರಷ್ಯಾ ಜಾಗತಿಕ ಚೆಸ್‌ ಶಕ್ತಿಯಾಗಿ ವಿಜೃಂಭಿಸಿದ್ದರ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ನಡೆಯಲಿದೆ. ಸ್ಥಳ ಮತ್ತು ದಿನಾಂಕಗಳು ನಿಗದಿಯಾಗಬೇಕಷ್ಟೇ.

ಭಾರತದಲ್ಲಿ ಚೆಸ್‌ ವ್ಯಾಪಕ ಮಟ್ಟದಲ್ಲಿ ಬೆಳೆಯಲು ಐದು ಬಾರಿಯ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಸಾಧನೆಗಳು ಪ್ರೇರಣೆಯಾದವು. ಹಲವು ಗ್ರ್ಯಾಂಡ್‌ಮಾಸ್ಟರ್‌ಗಳು ಉದಯಿಸಿದರು. ಭಾರತದ ಚೆಸ್‌ ಏಳಿಗೆಗೆ ಆನಂದ್ ಅವರ ಕೊಡುಗೆಯನ್ನು ಒಪ್ಪಿಕೊಂಡ ಕ್ಯಾಸ್ಪರೋವ್‌, ‘ವಿಶಿ ಆನಂದ್ ಅವರಿಂದ ‘ಬೆಳೆದ ಮಕ್ಕಳು’ ಈಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡತೊಡಗಿದ್ದಾರೆ’ ಎಂದು ಹೇಳಿದ್ದಾರೆ.

ಚೆಸ್‌ನ ಶಕ್ತಿಕೇಂದ್ರದಲ್ಲಿ ಆಗುತ್ತಿರುವ ಪಲ್ಲಟಗಳನ್ನು ಕ್ಯಾಸ್ಪರೋವ್‌ ಇನ್ನೊಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕ್ಯಾಸ್ಪರೋವ್‌ ಅವರು 1985 ರಿಂದ 1993ರವರೆಗೆ ವಿಶ್ವ ಚಾಂಪಿಯನ್‌ ಆಗಿದ್ದರು. ಅವರು ದಾಖಲೆ 225 ವಾರಗಳ ಕಾಲ ಅಗ್ರಮಾನ್ಯ ಆಟಗಾರನಾಗಿ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT