ಬರ್ಲಿನ್: ಭಾರತ ಜೂನಿಯರ್ ಪುರುಷರ ಹಾಕಿ ತಂಡ ಬುಧವಾರ ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ, ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ಪೂರ್ವಾರ್ಧದಲ್ಲಿ ಗೋಲುಗಳು ಬರಲಿಲ್ಲ. ಆಸ್ಟ್ರೇಲಿಯಾ ತಂಡದ ನಾಯಕ ಟೋಬಿ ಮಲೋನ್ 40ನೇ ನಿಮಿಷ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು.

ಆದರೆ ವಿರಾಮದ ನಂತರ ರೋಹಿತ್ (45ನೇ ನಿಮಿಷ) ಪೆನಾಲ್ಟಿ ಕಾರ್ನರ್ನಲ್ಲಿ ಗೋಲುಗಳಿಸಿ ಸ್ಕೋರ್ ಸಮ ಮಾಡಿದರು. 52ನೇ ನಿಮಿಷ ಅಜೀತ್ ಯಾದವ್ ಗಳಿಸಿದ ಗೋಲು ಭಾರತದ ಪಾಲಿಗೆ ಗೆಲುವಿನ ಗೋಲಾಗಿ ಪರಿಣಮಿಸಿತು.

ಭಾರತ ಲೀಗ್ ಪಂದ್ಯಗಳಲ್ಲಿ 1–7 ರಿಂದ ಜರ್ಮನಿಗೆ ಮಣಿದಿತ್ತು. ನಂತರ 3–1 ರಿಂದ ಆಸ್ಟ್ರೇಲಿಯಾ ಮೇಲೆ ಜಯಗಳಿಸಿತ್ತು. ಆದರೆ ಈ ಹಂತದ ಕೊನೆಯ ಪಂದ್ಯದಲ್ಲಿ 1–5 ರಿಂದ ಸ್ಪೇನ್ಗೆ ಮಣಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.