ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕ್ರೀಡಾಕೂಟ: ಭಾರತದ ಪುರುಷರ ಶೂಟಿಂಗ್ ತಂಡಕ್ಕೆ ಚಿನ್ನ

ವೈಯಕ್ತಿಕ ಶೂಟಿಂಗ್ ವಿಭಾಗದಲ್ಲಿ ನಿರಾಶೆ
Published 28 ಸೆಪ್ಟೆಂಬರ್ 2023, 12:53 IST
Last Updated 28 ಸೆಪ್ಟೆಂಬರ್ 2023, 12:54 IST
ಅಕ್ಷರ ಗಾತ್ರ

ಹಾಂಗ್‌ಝೌ :  ಏಷ್ಯನ್ ಕ್ರೀಡಾಕೂಟದ ಶೂಟಿಂಗ್ ರೇಂಜ್‌ನಲ್ಲಿ ಭಾರತದ ಚಿನ್ನದ ಬೇಟೆ ಗುರುವಾರವೂ ಮುಂದುವರಿಯಿತು.  ಪುರುಷರ ಶೂಟಿಂಗ್ ತಂಡವು ಚಿನ್ನ ಗೆದ್ದಿತು.

ಗುರುವಾರ ನಡೆದ ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್ಜೋತ್‌ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರಿದ್ದ ತಂಡವು  ಪ್ರಥಮ ಸ್ಥಾನ ಗಳಿಸಿತು. ಬುಧವಾರ ಮಹಿಳಾ ತಂಡವು ಚಿನ್ನದ ಸಾಧನೆ ಮಾಡಿತ್ತು.

ಭಾರತ ತಂಡವು ಒಟ್ಟು 1734 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿತು. ಆತಿಥೇಯ ಚೀನಾ ತಂಡವು ಕೇವಲ ಒಂದು ಅಂಕದ ಅಂತರದಿಂದ ಬೆಳ್ಳಿ ಪದಕ ಪಡೆಯಬೇಕಾಯಿತು. ವಿಯೆಟ್ನಾಂ ಶೂಟಿಂಗ್‌ ಬಳಘವು 1730 ಅಂಕಗಳೊಂದಿಗೆ ಕಂಚು ಜಯಿಸಿತು.

ಇದರೊಂದಿಗೆ ಶೂಟಿಂಗ್ ಪಡೆಯು ಭಾರತಕ್ಕೆ ಇದುವರೆಗೆ ಒಟ್ಟು 13 ಪದಕಗಳ ಕಾಣಿಕೆ ನೀಡಿದಂತಾಯಿತು. ಇದರಲ್ಲಿ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು ಒಳಗೊಂಡಿವೆ.

ಇದೇ ಶನಿವಾರ ತಮ್ಮ 22ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಸರಬ್ಜೋತ್ ಸಿಂಗ್ ತಮ್ಮ ಸಹ ಶೂಟರ್‌ಗಳೊಂದಿಗೆ ದೇಶಕ್ಕೆ ಚಿನ್ನದ ‘ಕಾಣಿಕೆ’ ನೀಡಿದರು. ಅವರು ಕ್ವಾಲಿಫಿಕೇಷನ್‌ನಲ್ಲಿ 580 ಅಂಕ ಗಳಿಸಿದರು. ಚೀಮಾ 578 ಮತ್ತು ನರ್ವಾಲ್ 576 ಅಂಕ ಕಲೆಹಾಕಿದರು.

ಸರಬ್ಜೋತ್ (95, 95, 97, 98, 97 ಹಾಗೂ 98) ಪ್ರತಿಯೊಂದು ಶಾಟ್‌ನಲ್ಲಿ ಉತ್ತಮ ಸಾಧನೆ ಮಾಡಿದರು. ಚೀಮಾ (97, 96, 97, 97, 96 ಮತ್ತು 95 ) ಹಾಗೂ ನರ್ವಾಲ್ (92, 96, 97, 99, 97 ಮತ್ತು 95) ಕೂಡ ತಮ್ಮ ಉಪಯುಕ್ತ ಕಾಣಿಕೆ ನೀಡುವಲ್ಲಿ ಹಿಂದೆ ಬೀಳಲಿಲ್ಲ. ಇದು ಭಾರತ ತಂಡವು ಚಿನ್ನದ ಹಾದಿಯಲ್ಲಿ ಸಾಗಲು ಕಾರಣವಾಯಿತು.

ಶೂಟಿಂಗ್‌ ರೇಂಜ್‌ನಲ್ಲಿ ಭಾರತಕ್ಕೆ ತಂಡ ವಿಭಾಗದಲ್ಲಿ ಒಲಿದ ಮೂರನೇ ಬಂಗಾರದ ಪದಕ ಇದು.

‘ತಂಡದಲ್ಲಿ ಎಲ್ಲರಲ್ಲೂ ಉತ್ತಮ ಬಾಂಧವ್ಯ ಇದೆ. ಆರೋಗ್ಯಕರ ಪೈಪೋಟಿಯೂ ಇದೆ. ಶ್ರೇಷ್ಠ ತಂಡ ಇದಾಗಿದೆ‘ ಎಂದು ಚೀಮಾ ಸಂತಸ ವ್ಯಕ್ತಪಡಿಸಿದರು.

ಭಾರತದ ಅರ್ಜುನ್‌ ಸಿಂಗ್ ಚೀಮಾ  –ಪಿಟಿಐ ಚಿತ್ರ
ಭಾರತದ ಅರ್ಜುನ್‌ ಸಿಂಗ್ ಚೀಮಾ  –ಪಿಟಿಐ ಚಿತ್ರ
ಭಾರತದ ಶಿವ ನರ್ವಾಲ್‌  –ಪಿಟಿಐ ಚಿತ್ರ
ಭಾರತದ ಶಿವ ನರ್ವಾಲ್‌  –ಪಿಟಿಐ ಚಿತ್ರ
ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ಪುರುಷರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತ ತಂಡದ ಶಿವ ನರ್ವಾಲ್ ಸರಬ್ಜೋತ್ ಸಿಂಗ್ ಹಾಗೂ ಅರ್ಜುನ್ ಸಿಂಗ್  –ಪಿಟಿಐ ಚಿತ್ರ
ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ಪುರುಷರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತ ತಂಡದ ಶಿವ ನರ್ವಾಲ್ ಸರಬ್ಜೋತ್ ಸಿಂಗ್ ಹಾಗೂ ಅರ್ಜುನ್ ಸಿಂಗ್  –ಪಿಟಿಐ ಚಿತ್ರ
ಉತ್ತರ ಕೊರಿಎಯಾದ ಎನ್ ಚಾಂಗೊಕ್ 
ಉತ್ತರ ಕೊರಿಎಯಾದ ಎನ್ ಚಾಂಗೊಕ್ 

Cut-off box - ಪದಕ ಸನಿಹ ಎಡವಿದ ಸರಬ್ಜೋತ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಅವರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯದ ಹೊಸ್ತಿಲಲ್ಲಿ ಎಡವಿದರು. ಅವರು ಕ್ವಾಲಿಫಿಕೇಷನ್ ಸುತ್ತಿನಲ್ಲಿ ಅವರು  ಐದನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಅಂತಿಮ ಸುತ್ತಿನಲ್ಲಿ ಅವರಿಗೆ ಮೂರು ಹಾಗೂ ನಾಲ್ಕನೇ ಶಾಟ್‌ಗಳಲ್ಲಿ ಕ್ರಮವಾಗಿ 9.8 ಮತ್ತು 9.4 ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಏಳನೇ ಶಾಟ್‌ನಲ್ಲಿ ನಿಖರ ಗುರಿ ಕಟ್ಟುವಲ್ಲಿ ವಿಫಲರಾದರು. ಕೇವಲ 8.9 ಪಾಯಿಂಟ್ ಗಳಿಸಿದರು. ಸರಬ್ಜೋತ್ ಹೋದವರ್ಷ ಭೋಪಾಲ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಆಡುವ ಅರ್ಹತೆ ಗಿಟ್ಟಿಸಬೇಕಾದರೆ ಇದೇ ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲಬೇಕಿದೆ.  ಇದೇ ಸುತ್ತಿನಲ್ಲಿ ಅರ್ಜುನ್ ಸಿಂಗ್ ಚಿಮಾ ಅವರೂ ಎಡವಿದರು.

Cut-off box - ಸ್ಕೀಟ್ ಮಿಶ್ರ ತಂಡಕ್ಕೆ ಏಳನೇ ಸ್ಥಾನ ಗಣೇಮತ್ ಶೇಕಾನ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಅವರಿದ್ದ ಮಿಶ್ರ ಸ್ಕೀಟ್ ತಂಡವು ಏಳನೇ ಸ್ಥಾನ ಪಡೆಯಿತು. ಅದರಿಂದಾಗಿ ಆರು ಸ್ಪರ್ಧಿಗಳಿರುವ ಫೈನಲ್‌ ಪ್ರವೇಶಿಸುವಲ್ಲಿ ವಿಫಲವಾಯಿತು. ಈ ಜೋಡಿಯು ಸರಾಸರಿ 138 ಅಂಕ ಗಳಿಸಿತು. ಬುಧವಾರ ಪುರುಷರ ಸ್ಕೀಟ್‌ ಸ್ಪರ್ಧೆಯಲ್ಲಿ ನರುಕಾ ಬೆಳ್ಳಿ ಪದಕ ಜಯಿಸಿದ್ದರು. ಕಣ್ಣೀರಧಾರೆಯಲ್ಲಿ ಉತ್ತರ ಕೊರಿಯಾ ತಂಡ ಹಾಂಗ್‌ಝೌ (ಎಎಫ್‌ಪಿ): ಉತ್ತರ ಕೊರಿಯಾದ ಶೂಟರ್‌ಗಳು ಗುರುವಾರ ಚಿನ್ನದ ಪದಕ ಜಯಿಸಿದರು.  ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಆನಂದಭಾಷ್ಪದಲ್ಲಿ ತೇಲಿಹೋದರು. 10 ಮೀಟರ್ಸ್ ರನ್ನಿಂಗ್ ಟಾರ್ಗೆಟ್ ಶೂಟಿಂಗ್‌ನಲ್ಲಿ ಉತ್ತರ ಕೊರಿಯಾ ತಂಡ ಜಯಿಸಿತು. ಪೇಕ್ ಒಕೆ ಸಿಮ್ ಪ್ಯಾಂಗ್ ಮಿಯಾಂಗ್ ಹಿಯಾಂಗ್ ಹಾಗೂ ರಿ ಜಿ ಯೀ ಅವರು ತಂಡದಲ್ಲಿದ್ದರು. ತಮ್ಮ ದೇಶದ ಧ್ವಜವು ಮೇಲೆರಿದಾಗ ಅವರೆಲ್ಲರೂ ಭಾವುಕಾರದರು. ಎದೆಯುಬ್ಬಿಸಿ ಗೌರವವಂದನೆ ಸಲ್ಲಿಸಿದರು. ಅವರ ಕಂಗಳಲ್ಲಿ ಕಣ್ಣೀರು ಧಾರೆಯಾಗಿತ್ತು. ಕೋವಿಡ್ ಬಿಕ್ಕಟ್ಟಿನ ನಂತರ ಕೊರಿಯಾ ತಂಡವು ಗಳಿಸಿದ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಇದಾಗಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್‌ನಲ್ಲಿ ಈ ದೇಶದ ಅಥ್ಲೀಟ್‌ಗಳು ಭಾಗವಹಿಸಿರಲಿಲ್ಲ. 2022ರ ಚಳಿಗಾಲದ ಒಲಿಂಪಿಕ್‌ ಕೂಟದಿಂದ ಅವರನ್ನು ನಿಷೇಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT